ಕರ್ನಾಟಕ

ಮಳೆ ಅವಾಂತರ : ಮನೆಯ ಗೋಡೆ ಕುಸಿತ

ರಾಜ್ಯ(ಮಂಡ್ಯ)ಅ.13:- ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಚಿಕ್ಕಪಾಳ್ಯದಲ್ಲಿ ಮಳೆ ಅವಾಂತರದಿಂದ ಮನೆಯ ಗೋಡೆ ಕುಸಿದಿದೆ.

ಕಳೆದ ರಾತ್ರಿ ಸುರಿದ ಮಳೆಯಿಂದ  ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಚಿಕ್ಕಪಾಳ್ಯ ಗ್ರಾಮದ ಚಿನ್ನಸ್ವಾಮಿ ಎಂಬುವರಿಗೆ ಸೇರಿದ ಮನೆಯ ಗೋಡೆ ಕುಸಿದಿದೆ. ಮನೆಯ ರೂಂ, ಶೌಚಾಲಯ, ಕೊಟ್ಟಿಗೆ ಗೋಡೆ ಕುಸಿದಿದ್ದು, ಘಟನೆಯಿಂದ ಸಾವಿರಾರೂ ರೂಪಾಯಿ ನಷ್ಟವುಂಟಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: