ಮೈಸೂರು

ಸಿವಿಲ್ ಪೊಲೀಸ್ ಹುದ್ದೆಗೆ ಪ್ರವೇಶ ಪರೀಕ್ಷೆ

ಮೈಸೂರಿನ  ಟೆರೆಶಿಯನ್ ಕಾಲೇಜು ಸೇರಿದಂತೆ ಒಟ್ಟು ನಗರದ 18 ಕೇಂದ್ರಗಳಲ್ಲಿ ಭಾನುವಾರ ಸಿವಿಲ್ ಪೊಲೀಸ್ ಹುದ್ದೆಗಾಗಿ ಪರೀಕ್ಷೆ ನಡೆಯಿತು.

ನಗರದ ಪ್ರತಿ ಕೇಂದ್ರಗಳಲ್ಲಿಯೂ  ಭಾನುವಾರ ಬೆಳಿಗ್ಗೆಯಿಂದಲೇ ಸಿವಿಲ್ ಪೊಲೀಸ್ ಹುದ್ದೆಗೆ ಅರ್ಜಿ ಸಲ್ಲಿಸಿದ ಯುವಕ ಯುವತಿಯರು ಪ್ರವೇಶ ಪರೀಕ್ಷೆ ಬರೆಯಲು ಆಗಮಿಸಿದ್ದರು.

ಪ್ರವೇಶ ಪರೀಕ್ಷೆಗೆ ಬಿಗಿ ಪೊಲೀಸ್ ಬಂದೋಬಸ್ತ್ ನ್ನು ಏರ್ಪಡಿಸಲಾಗಿತ್ತು. ಪರೀಕ್ಷೆಯು ಸಂಪೂರ್ಣ ಪಾರದರ್ಶಕತೆಯಿಂದ ಕೂಡಿದ್ದು, ಪರೀಕ್ಷಾ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು.

ಎನ್.ಆರ್ ಎಸಿಪಿ ಉಮೇಶ್ ಸೇಠ್ ನೇತೃತ್ವದಲ್ಲಿ ನಡೆದ ಪರೀಕ್ಷೆಯಲ್ಲಿ ಸುಮಾರು 3,600 ಅಭ್ಯರ್ಥಿಗಳು ಪರೀಕ್ಷೆಯನ್ನು  ಎದುರಿಸಿದ್ದಾರೆ.

Leave a Reply

comments

Related Articles

error: