ಪ್ರಮುಖ ಸುದ್ದಿ

ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಪ್ರತಿಭಟನೆ

ಪ್ರಮುಖ ಸುದ್ದಿ, ದೇವನಹಳ್ಳಿ, ಅ.೧೩: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಮಾದಿಗ ದಂಡೋರ ರಾಜ್ಯ ಸಮನ್ವಯ ಸಮಿತಿಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆಯಲಿರುವ ಮಾದಿಗರ ಬೃಹತ್ ತಮಟೆ ಘರ್ಜನೆ ಹೋರಾಟಕ್ಕೆ ದೇವನಹಳ್ಳಿಯಿಂದ ನೂರಾರು ಕಾರ್ಯಕರ್ತರು ಟೌನಿನ ಪರಿವೀಕ್ಷಣಾ ಮಂದಿರದಲ್ಲಿ ಪ್ರತಿಭಟನೆ ನಡೆಸಿ ಬೆಂಗಳೂರಿಗೆ ತೆರಳಿದರು.
ಈ ವೇಳೆ ರಾಜ್ಯ ಮಾದಿಗ ದಂಡೋರದ ರಾಜ್ಯ ಉಪಾಧ್ಯಕ್ಷ ಮಾತನಾಡಿ, ಕರ್ನಾಟಕ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ೧೦೧ ಜಾತಿಗಳನ್ನು ಸೇರಿಸಿ ಸಂವಿಧಾನದ ಅಡಿಯಲ್ಲಿ ನೀಡಿರುವ ಶೇ.೧೫ರಷ್ಟು ಮೀಸಲಾತಿಯಲ್ಲಿ ಅಸ್ಪಶ್ಯ ಜಾತಿಯವರಿಗೆ ಅನ್ಯಾಯವಾಗಿದೆ. ಆದ್ದರಿಂದ ಎ.ಜೆ.ಸದಾಶಿವ ಆಯೋಗದ ವರದಿಯಂತೆ ಮಾದಿಗರಿಗೆ ಶೇ.೬, ಮತ್ತು ಇತರೆಯವರಿಗೆ ಶೇ.೩, ೧ರಂತೆ ನೀಡಬೇಕೆಂದು ಬೆಂಗಳೂರಿನ ಜಿಲ್ಲಾದಿಕಾರಿಗಳಿಗೆ ಮನವಿ ಸಲ್ಲಿಸಲು ಹೊರಡುತ್ತಿzವೆ ಎಂದರು.
ಪ್ರಜಾ ವಿಮೋಚನಾ ಬಹುಜನ ಸಮಿತಿಯ ಆಧ್ಯಕ್ಷ ಬಿಜ್ಜವಾರ ನಾಗರಾಜ್ ಮಾತನಾಡಿ, ರಾಜ್ಯದಲ್ಲಿ ೧೯೯೬ರಲ್ಲಿ ಆರಂಭಗೊಂಡ ಮಾದಿಗರ ಮೀಸಲಾತಿ ಹೋರಾಟಕ್ಕೆ ೨೧ ವರ್ಷಗಳ ಇತಿಹಾಸವಿದೆ. ಜನಸಂಖ್ಯೆಗೆ ಅನುಗುಣವಾಗಿ ೩೩ ಉಪಜಾತಿಗಳಿರುವ ಮಾದಿಗ ಸಮುದಾಯಕ್ಕೆ ನ್ಯಾಯ ಒದಗಿಸಬೇಕೆಂದು ಪ್ರತಿ ಜಿಲ್ಲೆಗಳಲ್ಲಿ ಬೃಹತ್ ತಮಟೆ ಘರ್ಜನೆ ಏರ್ಪಡಿಸಲಾಗಿದೆ ಎಂದರು.
ಪ್ರತಿಭಟನೆಯಲ್ಲಿ ಡಿ.ಆರ್.ಬಾಲರಾಜು, ಮೂರ್ತಿ, ವೆಂಕಟೇಶ್ ಮುನಿರಾಜು ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು. (ವರದಿ ಬಿ.ಎಂ)

 

Leave a Reply

comments

Related Articles

error: