ಪ್ರಮುಖ ಸುದ್ದಿಮೈಸೂರು

ಮಕ್ಕಳ ಮಾರಾಟ ಜಾಲ ಪ್ರಕರಣದ ತನಿಖೆಗೆ ಸಿಐಡಿ ಸಹಕಾರ ಪಡೆಯಲಾಗುವುದು: ರವಿ ಡಿ ಚೆನ್ನಣ್ಣನವರ್

whatsapp-image-2016-11-06-at-1-50-47-pmಮೈಸೂರಿನಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಂಡ್ಲುಪೇಟೆಯಲ್ಲಿ ಶನಿವಾರ ಮಗುವೊಂದು ಪತ್ತೆಯಾಗಿದ್ದು, ಈ ಮಗು ಸಹ ಇದೇ ಜಾಲಕ್ಕೆ ಬಲಿಯಾದ ಮಗುವಾಗಿದೆ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ ಚೆನ್ನಣ್ಣನವರ್ ಮಾಧ್ಯಮಕ್ಕೆ ತಿಳಿಸಿದ್ದಾwhatsapp-image-2016-11-06-at-1-50-48-pmರೆ.

ಗುಂಡ್ಲುಪೇಟೆಯಲ್ಲಿದ್ದ ಮಗುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೈಸೂರಿನ ನಸೀಮಾ ಆಸ್ಪತ್ರೆಯಲ್ಲಿದ್ದ ಮಗು ಶನಿವಾರ ಗುಂಡ್ಲುಪೇಟೆಯಲ್ಲಿ ಬಂಧಿತನಾದ ಫ್ರಾನ್ಸಿಸ್ ಬಳಿ ಸಿಕ್ಕಿತ್ತು.

ಮಕ್ಕಳ ಜಾಲ ಮಾರಾಟ ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಶಂಕೆ ಇದ್ದು, ಅಂತಾರಾಜ್ಯಕ್ಕೂ ಮಕ್ಕಳನ್ನು ಮಾರಾಟ ಮಾಡಲಾಗಿದೆ.

ದಿನೇದಿನೆ ತನಿಖೆಯಿಂದ ಹೊಸ ವಿಚಾರ ಪತ್ತೆಯಾಗುತ್ತಿದ್ದು, ಮತ್ತಷ್ಟು ಮಾಹಿತಿ ಬಹಿರಂಗವಾಗಬೇಕಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗೆ ಸಿಐಡಿ ತಂಡದ ಸಹಕಾರ ಪಡೆಯಲಾಗುವುದು. ಶೀಘ್ರದಲ್ಲೇ ಉಳಿದ ಆರೋಪಿಗಳನ್ನು ಪತ್ತೆ ಮಾಡಲಾಗುವುದೆಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣನವರ್ ಹೇಳಿದ್ದಾರೆ.

whatsapp-image-2016-11-06-at-1-50-50-pm

whatsapp-image-2016-11-06-at-1-50-49-pm

Leave a Reply

comments

Related Articles

error: