ಕ್ರೀಡೆ

ನಾಲ್ಕು ದಿನಗಳ ಟೆಸ್ಟ್ ಗೆ ಅನುಮೋದನೆ

ದೇಶ(ನವದೆಹಲಿ)ಅ.13:- ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ನಾಲ್ಕು ದಿನಗಳ ಟೆಸ್ಟ್ ಗೆ ಅನುಮೋದನೆ ನೀಡಿದೆ.

ಮೊದಲನೆಯದು  ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ಹೆ ನಡುವೆ ಡಿಸೆಂಬರ್ 26ರಿಂದ  ಬಾಕ್ಸಿಂಗ್ ಡೇ ಟೆಸ್ಟ್ ಮೂಲಕ ನಡೆಯಲಿದೆ. 2019ರ ವಿಶ್ವಕಪ್ ಅಂಗವಾಗಿ  ಸದಸ್ಯರು ನಾಲ್ಕುದಿನದ ಟೆಸ್ಟ್ ಆಟಗಳನ್ನು ಆಡಬಹುದೆಂದು ಐಸಿಸಿ ಸಭೆಯ ಬಳಿಕ ತಿಳಿಸಿದೆ. ಐಸಿಸಿ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಡೇವ್ ರಿಚರ್ಡ್ಸನ್ , ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಚೌಕಟ್ಟನ್ನು ರಚಿಸುವುದು ನಮ್ಮ ಆದ್ಯತೆಯಾಗಿದೆ. ವಿಶೇಷವಾಗಿ ಟೆಸ್ಟ್ ಗೆ ಹೊಸ ಉಲ್ಲೇಖಗಳನ್ನು ನೀಡುವುದಾಗಿದೆ ಎಂದಿದ್ದಾರೆ. ಹೊಸ ಪ್ರಯೋಗಗಳನ್ನು ಕಂಡುಕೊಳ್ಳಬೇಕು ಮತ್ತು ಅದೇ ದಿಕ್ಕಿನಲ್ಲಿ ಹೆಜ್ಜೆ ಹಾಕಬೇಕು. ಟೆಸ್ಟ್ ಗೆ ದೀರ್ಘ ಭವಿಷ್ಯವಿದೆ ಎಂಬ ಕುರಿತು ಚರ್ಚೆ ನಡೆಸಲಾಗಿದೆ ಎಂದಿದ್ದಾರೆ. (ಎಸ್.ಎಚ್)

Leave a Reply

comments

Related Articles

error: