ಕರ್ನಾಟಕಪ್ರಮುಖ ಸುದ್ದಿ

ಚಿಟ್ ಫಂಡ್ ವಂಚನೆ ಪ್ರಕರಣ ಸಿಐಡಿಗೆ ಹಸ್ತಾಂತರ

ಬೆಂಗಳೂರು,ಅ.13-`ಪ್ರಸಿದ್ಧಿ ಚಿಟ್ ಫಂಡ್’ ಸಂಸ್ಥೆ ವಿರುದ್ಧದ ವಂಚನೆ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ಹಸ್ತಾಂತರಿಸಿದೆ. ನಟಿ ಸಂಜನಾ ಸೇರಿದಂತೆ ಹಲವು ಮಂದಿಗೆ ಚಿಟ್ ಫಂಡ್ ಕೋಟ್ಯಾಂತರ ರೂ. ವಂಚನೆ ಮಾಡಿತ್ತು. ಸಂಸ್ಥೆಯ ಮುಖ್ಯಸ್ಥ ಮಹೇಶ್ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ನಿರೂಪಾ ಅವರಿಗೆ ವಿಚಾರಣೆಗೆ ಹಾಜರಾಗಲು ಸಿಐಡಿ ನೋಟೀಸ್ ಜಾರಿಗೊಳಿಸಿದೆ.
ನಟಿ ಸಂಜನಾ ಅವರಿಗೆ 25 ಲಕ್ಷ ಸೇರಿದಂತೆ ಹಲವು ಮಂದಿಗೆ ಕೋಟ್ಯಾಂತರ ರೂ. ವಂಚನೆ ಮಾಡಿರುವ ಸಂಸ್ಥೆ 100ಕ್ಕೂ ಅಧಿಕ ಜನರಿಂದ ಹಣ ಸಂಗ್ರಹ ಮಾಡಿತ್ತು. ಸಂಸ್ಥೆ ಗ್ರಾಹಕರಿಗೆ ಹಣವನ್ನು ಮರಳಿಸದೆ ವಂಚನೆ ಮಾಡಿದೆ. ಈ ಬಗ್ಗೆ ನಟಿ ಸಂಜನಾ ಹಾಗೂ ಹಲವರು ಸಂಸ್ಥೆ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಮಲೇಶ್ವರಂ ಪೊಲೀಸ್ ಠಾಣೆಯಲ್ಲಿ ಆಗಸ್ಟ್ ನಲ್ಲಿ ಚಿಟ್ ಫಂಡ್ ವಿರುದ್ಧ ದೂರು ದಾಖಲಾಗಿತ್ತು. (ವರದಿ-ಎಂ.ಎನ್)

Leave a Reply

comments

Related Articles

error: