ಮೈಸೂರು

ಚಿಲ್ಡ್ರನ್ಸ್ ಲಿಟರರಿ ಕ್ಲಬ್ ನ 27ನೇ ವಾರ್ಷಿಕೋತ್ಸವ ಅ.15.

ಮೈಸೂರು, ಅ. 13 : ಚಿಲ್ಡ್ರನ್ಸ್ ಲಿಟರರಿ ಕ್ಲಬ್‌ನ 27ನೇ ವಾರ್ಷಿಕೋತ್ಸವವನ್ನು ಅ.15ರ ಬೆಳಿಗ್ಗೆ 10.30ಕ್ಕೆಜಯಲಕ್ಷ್ಮಿಪುರಂನ ಮಹಾಜನ ಪ್ರೌಢಶಾಲೆಯ ಸುಬ್ಬಲಕ್ಷ್ಮಿ ಹಾಲ್‌ನಲ್ಲಿ ಏರ್ಪಡಿಸಲಾಗಿದೆ ಎಂದು ಕ್ಲಬ್‌ನ ನಿರ್ದೇಶಕಿ ಡಾ.ಆರ್.ಪೂರ್ಣಿಮಾ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾರದಾವಿಲಾಸ ಬಿಎಡ್ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎಚ್.ಎಸ್.ಉಮೇಶ್ ವಹಿಸಲಿದ್ದು, ಮುಖ್ಯಅತಿಥಿಗಳಾಗಿ ಪೊಲೀಸ್ ಅಧೀಕ್ಷಕ ರವಿ.ಡಿ.ಚೆನ್ನಣ್ಣನವರ್ ಆಗಮಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಚಿಲ್ಟ್ರನ್ಸ್ ಲಿಟರರಿ ಕ್ಲಬ್‌ನ ಜಾಲತಾಣ www.childrensliteraryclub.org ನ್ನು ಬೆಂಗಳೂರಿನ ಸಿಲ್ ಸ್ಟುಡಿಯೋ ಆರ್ಟಿಸ್ಟಿಕ್ ಡೈರೆಕ್ಟರ್ ಡಾ.ಐ.ಎಲ್.ಶ್ರುತಿ ಅನಾವರಣ ಮಾಡಲಿದ್ದಾರೆ ಎಂದರು.

ಕಳೆದ 1990ರಿಂದ ಚಿಲ್ಡ್ರನ್ಸ್ ಲಿಟರರಿ ಕ್ಲಬ್ ಮೂಲಕ ಹಲವಾರು ಚಟುವಟಿಕೆಗಳನ್ನು ನಡೆಸುವ ಮೂಲಕ ಆರ್ಥಿಕ ದುರ್ಬಲ ಹಾಗೂ ಮುಖ್ಯವಾಹಿನಿಯಲ್ಲಿ ಇಲ್ಲದ ಮಕ್ಕಳ ಅಭಿವೃದ್ಧಿ ನಡೆಸಲಾಗುತ್ತಿದೆ. ಮಕ್ಕಳನ್ನು ಪಠ್ಯಕ್ರಮದಾಚೆ ಕರೆದೊಯ್ಯುವುದು, ಹೊಸ ಹೊಸ ಸಂಗತಿಗಳನ್ನು ಕಲಿಸಿ ಜ್ಞಾನಾರ್ಜನೆ ಮಾಡುವುದು, ಬೇಸಿಕ್ ಇಂಗ್ಲಿಷ್ ಅನ್ನು ಕಲಿಸಲಾಗುವುದು ಎಂದು ತಿಳಿಸಿದರು.

ಆರಂಭದಲ್ಲಿ ಹವ್ಯಾಸವಾಗಿ ಇಂತಹ ಸೇವೆ ಮಾಡುತ್ತಿದ್ದೆ, ನಿವೃತ್ತಿ ನಂತರ ನಾನು ನನ್ನ ಸಂಪೂರ್ಣ ಸಮಯವನ್ನು ಮಕ್ಕಳಿಗಾಗಿ ಮೀಸಲಿರಿಸಿದ್ದು ಈ ನಿಟ್ಟಿನಲ್ಲಿ ರಾಜ್ಯದ 30 ಜಿಲ್ಲೆಗಳ ಎಲ್ಲಾ ಶಾಲೆಗಳಲ್ಲಿಯೂ ನನ್ನ ಕಾರ್ಯಕ್ರಮವನ್ನು ವಿಸ್ತರಿಸಿರುವೆ, ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವುದು ಸಂಸ್ಥೆಯ ಪ್ರಮುಖ ಧೇಯ್ಯವಾಗಿದೆ ಎಂದು ಹೇಳಿದರು.

Leave a Reply

comments

Related Articles

error: