ದೇಶಮನರಂಜನೆ

ಹಾಸ್ಯದ ಹೊನಲನ್ನು ಹರಿಸಿ ಎಲ್ಲರನ್ನೂ ನಗಿಸುವ ಹಾಸ್ಯ ನಟ ಎಲ್ಲಿದ್ದಾರೆ..?

ದೇಶ(ಮುಂಬೈ)ಅ.13:- ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ನ ಯಾವ ಸಿನಿಮಾದಲ್ಲಿಯೂ ಇವರು ಕಂಡು ಬರುತ್ತಿಲ್ಲ, ಎಲ್ಲಿ ಹೋಗಿರಬಹುದು? ಹೇಗಿರಬಹುದು ಎಂಬ ಪ್ರಶ್ನೆಗಳು ಕಾಡುತ್ತಿರಬಹುದು ಹಾಗಾದರೆ ಯಾರವರು. ಅವರೇ ಹಾಸ್ಯದ ಹೊನಲನ್ನು ಹರಿಸಿ ಎಲ್ಲರನ್ನೂ ನಗಿಸುವ ಖಾದರ್ ಖಾನ್.

ಅವರೇನೂ ಚೆನ್ನಾಗಿಯೇ ಇದ್ದಾರೆ ಆದರೆ ಕೆನಡಾದಲ್ಲಿದ್ದಾರೆ. ವಯೋಸಹಜ ಸಮಸ್ಯೆಗಳು ಅವರನ್ನು ಕಾಡುತ್ತಿವೆಯಂತೆ. ಅವರು ಕೇವಲ ತನ್ನ ಪುತ್ರ ಹಾಗೂ ಸೊಸೆಯ ಮಾತುಗಳನ್ನಷ್ಟೇ ಅರ್ಥಮಾಡಿಕೊಳ್ಳುತ್ತಾರಂತೆ. ಯಾರಾದರೂ ಬೇರೆ ವ್ಯಕ್ತಿಗಳು ಅವರನ್ನು ಮಾತನಾಡಿಸಿದರೆ ಪರಿಚಯ ಹೇಳಲು ಬಹಳ ಸಮಯ ತೆಗೆದುಕೊಳ್ಳುತ್ತಾರಂತೆ. ಯಾವುದೇ ಚಿಂತೆಯ ವಿಚಾರವಿಲ್ಲ. ಅವರು ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ತಮ್ಮ ಮೊಮ್ಮಗ ಮತ್ತು ಮೊಮ್ಮಗಳೊಂದಿಗೆ ತುಂಬಾ ಖುಷಿಯಲ್ಲಿರುತ್ತಾರೆ ಎಂದು ಸೊಸೆ ಶಾಹಿಸ್ತಾ ಚಾನೆಲ್ ಒಂದಕ್ಕೆ ತಿಳಿಸಿದ್ದಾರಂತೆ. ಕಳೆದ ಕೆಲವು ದಿನಗಳ ಹಿಂದೆ ಖಾದರ್ ಖಾನ್ ಪುತ್ರ ಸರಫರಾಜ್  ತನ್ನ ತಂದೆ ನಡೆದಾಡಲು ಕಷ್ಟಪಡುತ್ತಾರೆ. ಎರಡೂ ಕಡೆಅವರಿಗೆ ಸಫೋರ್ಟ್ ಬೇಕಾಗುತ್ತದೆ. ಕೆಲವು ಹೆಜ್ಜೆ ನಡೆದರೆ ಸ್ವಲ್ಪದರಲ್ಲಿಯೇ ಕುಳಿತು ಬಿಡುತ್ತಾರೆ. ಎಲ್ಲಾದರೂ ಬಿದ್ದು ಬಿಟ್ಟರೆ ಎಂಬ ಭಯ ಅವರನ್ನು ಕಾಡುತ್ತಿದೆ ಎಂದಿದ್ದರು.

ಖಾದರ್ ಖಾನ್ ಮರಣ ಹೊಂದಿದ್ದಾರೆ ಎಂಬ ವದಂತಿಗಳು ಹರಡಿದ್ದವು. ನಾನಿನ್ನೂ ಜೀವಂತವಾಗಿಯೇ ಇದ್ದೇನೆ ಎಂದಿದ್ದರು. (ಎಸ್.ಎಚ್)

Leave a Reply

comments

Related Articles

error: