ಸುದ್ದಿ ಸಂಕ್ಷಿಪ್ತ

ಭಾವಸಾರ ಕ್ಷತ್ರಿಯ : ಗುರುವಂದನಾ, ಪದಗ್ರಹಣ, ಉಚಿತ ಆರೋಗ್ಯ ತಪಾಸಣಾ ಶಿಬಿರ ಅ.15.

ಮೈಸೂರು,ಅ.13 : ಅಖಿಲ ಭಾರತೀಯ ಭಾವಸಾರ ಕ್ಷತ್ರಿಯ ಮಹಾಸಭಾ ಯುವ ಪರಿಷತ್ ನಿಂದ ಗುರುವಂದನಾ, ಪದಗ್ರಹಣ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಅ.15ರ ಬೆಳಗ್ಗೆ 11ಕ್ಕೆ ಕಬೀರ್ ರಸ್ತೆಯ ಶ್ರೀಪಾಂಡುರಂಗ ಸ್ವಾಮಿ ದೇವಸ್ಥಾನದಲ್ಲಿ ಆಯೋಜಿಸಿದೆ.

ಎಐಬಿಕೆ ಮಹಾಸಭಾ ರಾಜ್ಯಾಧ್ಯಕ್ಷ ಸುಧೀರ್ ಎಸ್. ನವಲೆ ಉದ್ಘಾಟಿಸುವರು, ಹಿರಿಯ ರಾಜ್ಯ ಉಪಾಧ್ಯಕ್ಷ ಜಯರಾಂ ರಾವ್ ಲಾಳಿಗೆ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಎಐಬಿಕೆ ಮಹಾಸಭಾ ಪಧವೀದರರ ಪರಿಷತ್ ರಾಜ್ಯಾಧ್ಯಕ್ಷ ಗಜಾನನ್ ದೇವಗಿರಿಕರ್,  ಯುವ ಪರಿಷತ್ ರಾಜ್ಯಾಧ್ಯಕ್ಷೆ ವೀಣಾ ಅರುಣ್ ಮಾಲತ್ಕರ್,  ಸಪ್ನ ಕಿರಣ್, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಬೊಂಗಾಳೆ, ಶಾಸಕ ವಾಸು, ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಹೆಚ್.ಮಂಜುನಾಥ್, ಜೆಡಿಎಸ್ ನಗರಾಧ್ಯಕ್ಷ ಹರೀಶ್ ಗೌಡ ಮೊದಲಾದವರು ಭಾಗವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: