ಕರ್ನಾಟಕ

ಓಣಂ ಉತ್ಸವದಲ್ಲಿ ಪುಂಡರ ದಾಂಧಲೆ : ಕ್ರಮಕ್ಕೆ ಒತ್ತಾಯ

ರಾಜ್ಯ(ಮಡಿಕೇರಿ)ಅ.13:- ಅ.8ರಂದು ಪಟ್ಟಣದಲ್ಲಿ ನಡೆದ ಓಣಂ ಉತ್ಸವದಲ್ಲಿ ಭಾಗವಹಿಸಿದ್ದ ಕೆಲ ಪುಂಡರು ರಾತ್ರಿ ಪಟ್ಟಣದಲ್ಲಿ ದಾಂಧಲೆ ನಡೆಸಿ, ಒಕ್ಕಲಿಗ ಯುವಕರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದೇವೆ. ಘಟನೆಗೆ ನಿರ್ದಿಷ್ಟ ಜನಾಂಗವನ್ನು ಹೊಣೆ ಮಾಡಿಲ್ಲ ಎಂದು ಒಕ್ಕಲಿಗ ಮುಖಂಡರು ಹೇಳಿದ್ದಾರೆ.

ಐಗೂರು, ನಾಕೂರು, ಸುಂಠಿಕೊಪ್ಪದಿಂದ ಪಟ್ಟಣಕ್ಕೆ ಆಗಮಿಸಿದ ಕೆಲವು ಪುಂಡರು ಅಂದು ದಾಂಧಲೆ ಮಾಡಿದ್ದಾರೆ. ಅವರ ವಿರುದ್ಧ ಅನೇಕ ಕ್ರಿಮಿನಲ್ ಮೊಕದ್ದಮೆಗಳಿವೆ, ಸಮಾಜದ ಮುಖಂಡರು ಅವರನ್ನು ಕರೆದು ಬುದ್ದಿ ಹೇಳಬೇಕು. ಸಮಾಜವನ್ನು ಎತ್ತಿಕಟ್ಟುವ ಕೆಲಸ ಮಾಡಬಾರದು. ಜಿಲ್ಲೆಯಲ್ಲಿ ಎಲ್ಲಾ ಸಮಾಜದವರೂ ಅನೂನ್ಯವಾಗಿದ್ದಾರೆ. ಕೆಲವರ ಹೇಳಿಕೆಯಿಂದ ಸಜ್ಜನರ ಮನಸ್ಸಿಗೆ ನೋವಾಗಬಹುದು ಎಂದು ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕ ನಂದಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಇಲ್ಲಿನ ಮೂಲನಿವಾಸಿಗಳಾದ ಒಕ್ಕಲಿಗ ಜನಾಂಗದವರು ಶಾಂತಿ ಪ್ರಿಯರು ಹಾಗಂತ ಕ್ರಿಮಿನಲ್‍ಗಳ ಹಾವಳಿಯನ್ನು ನಿರಂತವಾಗಿ ಸಹಿಸಲು ಸಾಧ್ಯವಿಲ್ಲ. ಒಕ್ಕಲಿಗರ ವೇದಿಕೆಯ ಪದಾಧಿಕಾರಿಗಳ ಹಿನ್ನೆಲೆಯ ಬಗ್ಗೆ ಪ್ರಶ್ನೆ ಮಾಡಿರುವ ಮಲೆಯಾಳ ಸಮಾಜದ ಮುಖಂಡ ವಿ.ಎಂ.ವಿಜಯ ಅವರ ಹಿನ್ನೆಲೆ ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಬಿ.ಬಿ.ಸತೀಶ್, ಮಿಥುನ್ ಹಾನಗಲ್, ಗೌಡಳ್ಳಿ ಪ್ರಸ್ಸಿ, ಹೊಸಬೀಡು ವಿಜಯ್, ಪಿ.ಮಧು, ಮಚ್ಚಂಡ ಅಶೋಕ್ ಇದ್ದರು.(ಕೆಸಿಐ,ಎಸ್.ಎಚ್)

Leave a Reply

comments

Related Articles

error: