ಕರ್ನಾಟಕಪ್ರಮುಖ ಸುದ್ದಿಮೈಸೂರು

ಶಾಸಕ ಚಿಕ್ಕಮಾದು ಆರೋಗ್ಯ ವಿಚಾರಿಸಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ

ಮೈಸೂರು,ಅ.13:- ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಶಾಸಕ ಚಿಕ್ಕಮಾದು ಆರೋಗ್ಯ ವಿಚಾರಿಸಿದ್ದಾರೆ. ಹೆಚ್.ಡಿ.ಕೋಟೆ ಶಾಸಕ ಚಿಕ್ಕಮಾದು ಮೈಸೂರಿನ ಕುವೆಂಪುನಗರದ ಸಿಗ್ಮಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಗಾಗಿ ದಾಖಲಾಗಿದ್ದಾರೆ.

ಈ ಕುರಿತು ಮಾತನಾಡಿದ ಹೆಚ್.ಡಿ.ದೇವೇಗೌಡ ಬಹು ಅಂಗಾಗಗಳ ಸಮಸ್ಯೆಯಿಂದ ಬಳಲುತ್ತಿರುವ ಶಾಸಕ ಚಿಕ್ಕಮಾದು ಈಗ ಆರೋಗ್ಯವಾಗಿದ್ದಾರೆ. ಲಂಗ್ಸ್ ಎಕ್ಸ್ ಪರ್ಟ್ ಗಳು ಚಿಕ್ಕಮಾದು ಆರೋಗ್ಯ ವಿಚಾರಿಸುತ್ತಿದ್ದಾರೆ. ವೈದ್ಯರ ಬಳಿ ಚಿಕ್ಕಮಾದು ಆರೋಗ್ಯದ ಮಾಹಿತಿ ಪಡೆದಿದ್ದೇನೆ. ಯಾವುದೇ ತೊಂದರೆ ಇಲ್ಲ ಚಿಕ್ಕಮಾದು ಶೀಘ್ರವಾಗಿ ಗುಣಮುಖರಾಗುತ್ತಾರೆ. ತಾಯಿ ಚಾಮುಂಡೇಶ್ವರಿ ಚಿಕ್ಕಮಾದುಗೆ ಆರೋಗ್ಯ ನೀಡಲಿ ಎಂದು ಕೇಳಿಕೊಳ್ಳುತ್ತೇನೆ ಎಂದರು.

ಸಚಿವ ರೋಷನ್ ಬೇಗ್ ಪ್ರಧಾನಿ ಬಗ್ಗೆ ಅವಾಚ್ಯ ಶಬ್ದ ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಗರಂ ಆದ ಅವರು .ಸಚಿವರು ಆ ರೀತಿ ಅವಾಚ್ಯ ಶಬ್ಧ ಗಳನ್ನು ಬಳಕೆ ಮಾಡಬಾರದು. ಪ್ರತಿಯೊಂದು ಹುದ್ದೆಗೂ ತಮ್ಮದೇ ಆದ ಗೌರವ ಇದೆ. ಪ್ರಧಾನಿಗಳಾಗಲಿ ,ಮುಖ್ಯಮಂತ್ರಿಗಳಿಗಾಗಲಿ ಹಗುರ ಮಾತು ಸರಿಯಲ್ಲ ಎಂದರು. ಹೆಚ್.ಡಿ.ಕುಮಾರಸ್ವಾಮಿ ಆರೋಗ್ಯ ಸೊಗಸಾಗಿದೆ. ನ.1 ರಿಂದ ನೀವು ಹಳೆ ಕುಮಾರಸ್ವಾಮಿಯನ್ನು ನೋಡ್ತೀರಿ.ರಾಜ್ಯಾದ್ಯಂತ ಕುಮಾರಸ್ವಾಮಿ ಪ್ರವಾಸ ಕೈಗೊಳ್ಳಲಿದ್ದಾರೆ. ಶ್ರೀನಿವಾಸ ಪ್ರಸಾದ್ ರನ್ನು ಜೆಡಿಎಸ್ ನಾಯಕರು ಭೇಟಿ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಪ್ರಸಾದ್ ನಾನು ಹಳೆ ಸ್ನೇಹಿತರು. ಭೇಟಿಯಲ್ಲಿ ಯಾವುದೇ ವಿಶೇಷತೆ ಇಲ್ಲ,ಪ್ರಸಾದ್ ನಮ್ಮ ಪಕ್ಷದಲ್ಲಿದ್ದವರು ಎಂದರು. ಜೆಡಿಎಸ್ ಟಿಕೆಟ್ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಡಿಸೆಂಬರ್ ನಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗಲಿದೆ. ಗೊಂದಲ ಇರೋ ಕ್ಷೇತ್ರಗಳ ಬಗ್ಗೆ ಖಾಸಗಿ ಸರ್ವೆ. ಸರ್ವೆ ಮೂಲಕ ಅಭ್ಯರ್ಥಿ ಆಯ್ಕೆಯಾಗಲಿದೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: