ಮೈಸೂರು

ಕೈ ಉತ್ಪನ್ನಗಳಿಗೆ ಕರ ವಿಧಿಸದಿರಿ : ಕರನಿರಾಕರಣೆಯ ಸತ್ಯಾಗ್ರಹ

ಮೈಸೂರು,ಅ.14:- ಕೈ ಉತ್ಪನ್ನಗಳನ್ನು ಕರಮುಕ್ತಗೊಳಿಸಬೇಕೆಂದು ಒತ್ತಾಯಿಸಿ, ಗ್ರಾಮಸೇವಾ ಸಂಘದ ನೇತೃತ್ವದಲ್ಲಿ ಮೈಸೂರಿನ ಕಲಾಮಂದಿರದ ಆವರಣದಲ್ಲಿ ಕರನಿರಾಕರಣೆಯ ಸತ್ಯಾಗ್ರಹ ನಡೆಸಲಾಯಿತು.

ಶುಕ್ರವಾರ ಮಡಕೆ, ಬೀಸಣಿಕೆ ಸೇರಿದಂತೆ ವಿವಿಧ ಉತ್ಪನ್ನಗಳೊಂದಿಗೆ ಸತ್ಯಾಗ್ರಹ ನಡೆಸಿದ ಪ್ರಗತಿಪರ ಚಿಂತಕರು, ರಂಗಕರ್ಮಿಗಳು, ಸಾಹಿತಿಗಳು ಕೈ ತ್ಪನ್ನಗಳಿಗೆ ಕರವಿಧಿಸಬಾರದೆಂದು ಒತ್ತಾಯಿಸಿದರು. ರಂಗಕರ್ಮಿ ಪ್ರಸನ್ನ ಮಾತನಾಡಿ ಗ್ರಾಮೀಣ ಭಾಗದಲ್ಲಿ ಉತ್ಪಾದನೆಯಾಗುವ ಬಹುತೇಕ ಉತ್ಪನ್ನಗಳೆಲ್ಲವೂ ಕೈ ಉತ್ಪನ್ನಗಳೇ ಆಗಿವೆ. ಇದಕ್ಕೆ ಕರ ವಿಧಿಸಿದರೆ ಗ್ರಾಮೀಣಜನರ ಬದುಕು ದುಸ್ತರವಾಗಲಿದೆ. ಕರವಿಧಿಸದಿದ್ದಲ್ಲಿ ಆರ್ಥಿಕ ಮಟ್ಟ ಸುಧಾರಿಸಲಿದೆ. ಸ್ವಾತಂತ್ರ್ಯಾ ನಂತರ ದೇಶದಲ್ಲಿ ಪ್ರಥಮ ಬಾರಿಗೆ ಕೇಂದ್ರ ಸರ್ಕಾರ ಕೈ ಉತ್ಪನ್ನಗಳಿಗೆ ಕರ ವಿಧಿಸಲು ಹೊರಟಿದೆ. ಈ ಮೂಲಕ ಗ್ರಾಮೀಣರನ್ನು ಸಾಲಗಾರರನ್ನಾಗಿ ಹಾಗೂ ಭಿಕ್ಷುಕರನ್ನಾಗಿ ಮಾಡಲಾಗುತ್ತಿದೆ ಎಂದು ತಿಳಿಸಿದರು. ಜಿಎಸ್ ಟಿ ಯಿಂದ ಹೊರಗಿಡಬೇಕೆಂದು ಒತ್ತಾಯಿಸಿ ಈಗಾಗಲೇ ಪ್ರಮುಖರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ಸಾಹಿತಿ ದೇವನೂರು ಮಹಾದೇವ, ಮಾಜಿ ಸ್ಪೀಕರ್ ಕೃಷ್ಣ, ಕಲಾವಿದರಾದ ಮೈಮ್ ರಮೇಶ್, ರಾಮೇಶ್ವರಿ ವರ್ಮ, ಚಿಂತಕ ಪ.ಮಲ್ಲೇಶ್ ಮತ್ತಿತರರು ಪಾಲ್ಗೊಂಡಿದ್ದರು. (ಎಸ್.ಎಚ್)

Leave a Reply

comments

Related Articles

error: