ಮೈಸೂರು

ದೀಪಾವಳಿ ಪ್ರಯುಕ್ತ ಪೌರಕಾರ್ಮಿಕರಿಗೆ ಸಮವಸ್ತ್ರ ಮತ್ತು ಸಿಹಿ ವಿತರಣೆ

ಮೈಸೂರು,ಅ.14:- ಮೈಸೂರು ನಗರದ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಜನತಾದಳದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ  ಪೌರಕಾರ್ಮಿಕ ಮತ್ತು ಶ್ರಮಿಕ ವರ್ಗದವರಿಗೆ 18ನೇ ವಾರ್ಡಿನ ನಗರಪಾಲಿಕೆಯ ಉದ್ಯಾನವನ ಮತ್ತು ಯುಜಿಡಿಯಲ್ಲಿ ಕೆಲಸ ಮಾಡುವ ಪೌರಕಾರ್ಮಿಕರಿಗೆ ಸಮವಸ್ತ್ರ ಮತ್ತು ಸಿಹಿ ವಿತರಿಸಲಾಯಿತು.

ಶನಿವಾರ ಕುವೆಂಪುನಗರದ ಎ ಟು ಝಡ್ ಬಳಿ ಇರುವ ರಾಷ್ಟ್ರಕವಿ ಕುವೆಂಪು ಪ್ರತಿಮೆಗೆ ಪುಷ್ಪಾರ್ಚನೆಗೈದು ಪೌರಕಾರ್ಮಿಕರಿಗೆ ಶಾಸಕ ಜಿ.ಟಿ.ದೇವೇಗೌಡ ಸಮವಸ್ತ್ರ ಹಾಗೂ ಸಿಹಿ ವಿತರಿಸಿದರು. ಈ ಸಂದರ್ಭ ಶಾಸಕ ಸಾ.ರಾ.ಮಹೇಶ್, ಮೇಯರ್ ಎಂ.ಜೆ.ರವಿಕುಮಾರ್, ಮನಪಾ ಸದಸ್ಯ ಕೆ.ವಿ.ಮಲ್ಲೇಶ್, ಮಾಜಿ ಮೇಯರ್ ಗಳಾದ ಆರ್.ಲಿಂಗಪ್ಪ, ಬಿ.ಎಲ್.ಭೈರಪ್ಪ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: