ದೇಶಮನರಂಜನೆ

ನಟಿ ಕಂಗನಾ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ ಆದಿತ್ಯಾ ಪಾಂಚೋಲಿ

ಮುಂಬೈ,ಅ.14-ಬಾಲಿವುಡ್ ನಟಿ ಕಂಗನಾ ರನೌತ್ ತಮ್ಮ ಹೇಳಿಕೆಗಳ ಮೂಲಕ ವಿವಾದ ಸೃಷ್ಟಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಕಂಗನಾ ಈಗ ತಾವು ನೀಡಿದ ಹೇಳಿಕೆಗಳಿಂದಲೇ ತೊಂದರೆಗೆ ಸಿಲುಕಿಕೊಳ್ಳುವಂತಾಗಿದೆ. ನಟ ಆದಿತ್ಯಾ ಪಾಂಚೋಲಿ ಕಂಗನಾ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ನಟ ಆದಿತ್ಯಾ ಪಾಂಚೋಲಿಯೊಂದಿಗೆ ನಾನು ಸಂಬಂಧ ಹೊಂದಿದ್ದೆ ಎಂದು ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ನಟ ಆದಿತ್ಯಾ ಪಾಂಚೋಲಿ ಮತ್ತು ಹಿರಿಯ ನಟಿ ಜರೀನಾ ವಹಾಬ್ ಮುಂಬೈನ ಅಂಧೇರಿ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಕ್ರಿಮಿನಲ್ ಕೇಸ್ ಹೂಡಿದ್ದಾರೆ. ಕಂಗನಾ ಮಾತ್ರವಲ್ಲದೆ ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಿರುವ ಕಂಗನಾ ಸಹೋದರಿ ರಂಗೋಲಿ ವಿರುದ್ಧವೂ ಇವರು ಮೊಕದ್ದಮೆ ಹೂಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿರುವ ನಟ ಆದಿತ್ಯಾ ಪಾಂಚೋಲಿ, ಕಂಗನಾ ಮಾಧ್ಯಮವೊಂದರ ಜತೆ ಮಾತನಾಡುವಾಗ ತಮ್ಮ ಕುಟುಂಬದ ಕುರಿತು ಇಲ್ಲ ಸಲ್ಲದ ಆರೋಪಗಳನ್ನು ಮಾಡಿದ್ದಾರೆ. ಅಲ್ಲದೆ, ನನ್ನ ಪತ್ನಿ, ಪುತ್ರ, ಪುತ್ರಿಯ ಹೆಸರನ್ನು ತೆಗೆದುಕೊಳ್ಳುವ ಮೂಲಕ ಅವರ ವರ್ಚಸ್ಸಿಗೆ ಧಕ್ಕೆ ತಂದಿದ್ದಾರೆ. ನನ್ನ ಹಾಗೂ ನನ್ನ ಕುಟುಂಬದ ವಿರುದ್ಧ ಆರೋಪ ಮಾಡುತ್ತಿರುವ ಕಂಗನಾ ಈ ಕುರಿತು ಸಾಕ್ಷ್ಯಾಧಾರಗಳನ್ನು ನೀಡಬೇಕು ಎಂದಿದ್ದಾರೆ.

ಇನ್ನು ಈ ಹಿಂದೆ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ನಟಿ ಕಂಗನಾ, ತಮ್ಮ ಮತ್ತು ನಟ ಹೃತಿಕ್ ನಡುವಿನ ಸಂಬಂಧದ ಕುರಿತು ಹೇಳಿಕೊಂಡಿದ್ದರು. ಅಲ್ಲದೆ ತಾವು ಬಾಲಿವುಡ್ ಗೆ ಪ್ರವೇಶ ಮಾಡಿದ್ದ ಹೊಸದರಲ್ಲಿ ನಟ ಪಾಂಚೋಲಿ ತನ್ನೊಂದಿಗೆ ಸಂಬಂಧ ಬೆಳೆಸಿದ್ದ ಎಂದು ಆರೋಪಿಸಿದ್ದರು. ಈ ಸುದ್ದಿ ಬೆನ್ನಲ್ಲೇ ಕಂಗನಾಗೆ ಎಚ್ಚರಿಕೆ ನೀಡಿದ್ದ ಪಾಂಚೋಲಿ ಕುಟುಂಬ ಬಹಿರಂಗ ಬೇಷರತ್ ಕ್ಷಮೆ ಯಾಚಿಸುವಂತೆ ಆಗ್ರಹಿಸಿತ್ತು.

 

Leave a Reply

comments

Related Articles

error: