ಮೈಸೂರು

`ವಿಶ್ವ ಉಪಶಮನ ಆರೈಕೆ ದಿನ’ ಅಂಗವಾಗಿ ನರ್ಸಿಂಗ್ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ

ಮೈಸೂರು,ಅ.14-ಪ್ರತಿಯೊಂದು ಜೀವವು ಅಮೂಲ್ಯ, ಚಿಕಿತ್ಸೆಗಿಂತ ಅರಿವೇ ಮದ್ದು, ಅಗತ್ಯವಿರುವವರಿಗೆ ಉತ್ತಮ ಸಮಯ ಬೇಕು ಸೇರಿದಂತೆ ಅನೇಕ ನಾಮಫಲಕಗಳನ್ನು ಹಿಡಿದು ಹೆಜ್ಜೆ ಹಾಕಿದ ನರ್ಸಿಂಗ್ ವಿದ್ಯಾರ್ಥಿಗಳು ಜನರದಲ್ಲಿ ವಿಶ್ವ ಉಪಶಮನ ಆರೈಕೆ ದಿನದ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸಿದರು.

ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯ, ಮೈಸೂರು ವೈದ್ಯಕೀಯ ಮಹಾವಿದ್ಯಾಲಯ, ನರ್ಸಿಂಗ್ ಕಾಲೇಜುಗಳ ಸಹಯೋಗದೊಂದಿಗೆ `ವಿಶ್ವ ಉಪಶಮನ ಆರೈಕೆ ದಿನ-2017′ ಈ ವರ್ಷದ ಘೋಷ ವಾಕ್ಯ `ಮರೆಯಲ್ಲಿ ಬಳಲುತ್ತಿರುವವರನ್ನು ಮರೆಯುವುದು ಬೇಡ’ ಎಂದು ನಗರದಲ್ಲಿ ಶನಿವಾರ ಜಾಗೃತಿ ಜಾಥಾ ನಡೆಸಿದರು.

ಮೈಸೂರು ವೈದ್ಯಕೀಯ ಮಹಾವಿದ್ಯಾನಿಲಯದ ಆವರಣದಿಂದ ಹೊರಟ ಜಾಗೃತಿ ಜಾಥಾವು ಇರ್ವಿನ್ ರಸ್ತೆ ಮೂಲಕ ತಾಲೂಕು ಕಚೇರಿ, ತಿಯೋಬೊಲ್ಡ್ ರಸ್ತೆಯ ಮೂಲಕ ಜಿಲ್ಲಾ ಆರೋಗ್ಯ ಕಚೇರಿಯ ಆವರಣದಲ್ಲಿರುವ ವೈದ್ಯರ ಭವನ ತಲುಪಿತು. ಜಾಥಾಕ್ಕೆ ಮೈಸೂರು ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಮತ್ತು ನಿರ್ದೇಶಕಿ ಡಾ.ಎಸ್.ರಾಧಾಮಣಿ ಚಾಲನೆ ನೀಡಿದರು.

ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಪಿ.ಕೆ.ಟಿ.ಬಿ ಮತ್ತು ಸಿಡಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಎಚ್.ಎಂ.ವಿರೂಪಾಕ್ಷ, ಡಾ.ಮಣಿಕರ್ಣಿಕಾ, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನ ಮುಖ್ಯಸ್ಥೆ ಸಿಂಧು ಸುರೇಶ್, ಡಾ.ಚಂದ್ರಶೇಖರ್ ಇತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿ-ಲೀಡ್ ನ ಎಂ.ಡಿ.ಎಂ ವಿದ್ಯಾರ್ಥಿಗಳು ಉಪಶಮನ ಆರೈಕೆಗೆ ಸಂಬಂಧಿಸಿದಂತೆ ಕಿರು ನಾಟಕ ಪ್ರದರ್ಶಿಸಿದರು. (ವರದಿ-ಎಚ್.ಎನ್, ಎಂ.ಎನ್)

 

 

 

Leave a Reply

comments

Related Articles

error: