ದೇಶ

ಕಳವಾಗಿದ್ದ ಕೇಜ್ರಿವಾಲ್ ಕಾರು ಪತ್ತೆ

ನವದೆಹಲಿ,ಅ.14-ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಕಳವಾಗಿದ್ದ ವ್ಯಾಗನ್ ಆರ್ ಕಾರು ಘಾಜಿಯಾಬಾದ್ ನಲ್ಲಿ ಪತ್ತೆಯಾಗಿದೆ. ಪತ್ತೆಯಾಗಿರುವ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಅ.12 ರಂದು ದಿಲ್ಲಿಯ ಮಂತ್ರಾಲಯದ ಗೇಟ್ ನಂಬರ್ 3 ರಿಂದ ಕೇಜ್ರಿವಾಲ್ ಅವರ ನೀಲಿ ಬಣ್ಣದ ವ್ಯಾಗನ್ ಆರ್ ಕಾರು ಕಳವಾಗಿತ್ತು. ಅರವಿಂದ ಕೇಜ್ರಿವಾಲ್ ಅವರು ತಮ್ಮ ರಾಜಕೀಯ ಜೀವನದ ಆರಂಭದ ಹಂತದಲ್ಲಿ ಈ ಕಾರನ್ನು ಬಳಸುತ್ತಿದ್ದರು. ಈ ಕಾರನ್ನು ಆಮ್ ಆದ್ಮಿ ಪಾರ್ಟಿಯ ಬೆಂಬಲಿಗ ಹಾಗೂ ಅನಂತರ ವಿದೇಶಕ್ಕೆ ಹೋಗಿದ್ದ ಕುಂದನ್ ಶರ್ಮಾ ಎಂಬವರು ಕೇಜ್ರಿವಾಲ್ ಗೆ ದಾನವಾಗಿ ನೀಡಿದ್ದರು. ಆಮ್ ಆದ್ಮಿ ಪಾರ್ಟಿ ಹೆಸರಿನಲ್ಲೇ ಕಾರನ್ನು ನೋಂದಾಯಿಸಲಾಗಿತ್ತು. ಪಕ್ಷದ ಮಾಧ್ಯಮ ಸಂಚಾಲಕಿ ವಂದನಾ ಸಿಂಗ್ ಈ ಕಾರನ್ನು ಬಳಸುತ್ತಿದ್ದರು.

ದಿಲ್ಲಿ ಮಂತ್ರಾಲಯದ ಎದುರಿನಿಂದ ಈ ಕಾರು ಕಳವಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಆಪ್, ನಗರದಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಅತ್ಯಂತ ಕಳಪೆಯಾಗಿರುವುದಕ್ಕೆ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರನ್ನು ಟೀಕಿಸಿತ್ತು. ಆಪ್ ಮುಖ್ಯ ವಕ್ತಾರ ಸೌರಭ್ ಭಾರದ್ವಾಜ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದರು. (ವರದಿ-ಎಂ.ಎನ್)

Leave a Reply

comments

Related Articles

error: