
ಬೆಂಗಳೂರು (ಅ.14): ಬೆಂಗಳೂರು ಆಕಾಶವಾಣಿ ಸುದ್ದಿ ವಿಭಾಗದ ಮುಖ್ಯಸ್ಥರಾಗಿ ಭಾರತೀಯ ಸಮಾಚಾರ ಸೇವೆಯ ಹಿರಿಯ ಅಧಿಕಾರಿ ಬಿ.ಬಿ.ನಂಜುಂಡಸ್ವಾಮಿ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಮೂಲತಃ ಮೈಸೂರಿನವರಾದ ಅವರು ಈ ಮುನ್ನ ನವಿಮುಂಬೈನ ಜಾಹೀರಾತು ಮತ್ತು ದೃಶ್ಯ ನಿರ್ದೇಶನಾಲಯದ ಸಹಾಯಕ ನಿರ್ದೇಶಕರಾಗಿ ಹಾಗೂ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಆಂಗ ಸಂಸ್ಥೆಯಾದ ಆರ್.ಎನ್.ಐ.ನ ಸಹಾಯಕ ಪ್ರೆಸ್ ರಿಜಿಸ್ಟ್ರಾರ್ ಆಗಿ ಸೇವೆ ಸಲ್ಲಿಸುತ್ತಿದ್ದರು.
(ಎನ್ಬಿಎನ್)