ಕರ್ನಾಟಕಪ್ರಮುಖ ಸುದ್ದಿ

ಶಿಲ್ಪಕಲಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಪ.ಪಂಗಡದ ಪರಿಣತರಿಗೆ ಫೆಲೋಷಿಪ್ ನೀಡಲು ಅರ್ಜಿಗಳ ಆಹ್ವಾನ

ಬೆಂಗಳೂರು (ಅ.14): ಕರ್ನಾಟಕ ಶಿಲ್ಪಕಲಾ ಕ್ಷೇತ್ರದಲ್ಲಿ ದುಡಿಯುತ್ತಿರುವ ವಿದ್ವಾಂಸರಿಗೆ ಒತ್ತಾಸೆ ನೀಡುವ ದೃಷ್ಟಿಯಿಂದ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು 2017-2018ನೇ ಸಾಲಿನ ಒಂದು ಲಕ್ಷ ರೂಪಾಯಿಗಳ ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಪಂಗಡದ ಅಭ್ಯಥಿಗಳಿಗೆ ಶಿಲ್ಪಕಲಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಪರಿಣಿತರಿಗೆ ಫೆಲೋಷಿಪ್ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಫೆಲೋಷಿಪ್‍ಗಳನ್ನು ಬಯಸುವವರು ಪಾರಂಪರಿಕ ಶಾಸ್ತ್ರೀಯ, ಸಮಕಾಲೀನ, ಜಾನಪದ, ಬುಡಕಟ್ಟು, ನಶಿಸುತ್ತಿರುವ ದೇಶಿಯ ಶಿಲ್ಪಕಲೆಗೆ ಸಂಬಂಧಿಸಿರುವ ವಿಷಯಗಳ ಬಗ್ಗೆ ಮಾತ್ರವೇ ಹೆಚ್ಚಿನ ಸಂಶೋಧನೆಯನ್ನು ಕೈಗೊಂಡು ಈ ಸಂಬಂಧದಲ್ಲಿ ತಮ್ಮ ಸಂಪ್ರಬಂಧವನ್ನು ಕನ್ನಡದಲ್ಲಿ ಬರೆಯಬೇಕು.

ಪಿ.ಎಚ್‍ಡಿ ಮತ್ತು ಡಿ.ಲಿಟ್ ಪದವಿಗಳಿಗಾಗಿ ಸಿದ್ಧಪಡಿಸಿರುವ ಅಥವಾ ಸಲ್ಲಿಸಬಹುದಾದ ಮಹಾಪ್ರಬಂಧಗಳನ್ನು ಫೆಲೋಷಿಪ್‍ಗಾಗಿ ಪರಿಗಣಿಸುವುದಿಲ್ಲ. ಸಂಶೋಧನಾ ಪ್ರಬಂಧಗಳು ಪಾರಂಪರಿಕ ಶಾಸ್ತ್ರೀಯ, ಸಮಕಾಲೀನ, ಜಾನಪದ ಬುಡಕಟ್ಟು ಶಿಲ್ಪಗಳಿಗೆ ಅನ್ವಯವಾಗುವ ಶಾಸ್ತ್ರ, ನಿರ್ಮಾಣ, ಕ್ರಮ. ಪದ್ಧತಿ, ಆಚಾರ ಇತ್ಯಾದಿಗಳ ಹಿನ್ನೆಲೆಯಾಗಿರುವ ಸೂತ್ರಗಳ ಸಂಕೇತ, ತತ್ತ್ವ, ದರ್ಶನ ಇತ್ಯಾದಿಗಳ ಆಮೂಲಾಗ್ರವಾದ ಅಧ್ಯಯನವಾಗಿರಬೇಕೆಂಬುದು ನಿಯೋಜಕರ ಆಶಯ. ಇದನ್ನು ಪ್ರಬಂಧಕಾರರು ಗಮಿನಿಸಬೇಕು.

ಪ್ರಬಂಧದೊಂದಿಗೆ ಅವಶ್ಯಕವಾಗುವ ರೇಖಾಚಿತ್ರ, ಛಾಯಾಚಿತ್ರ ಮುಂತಾದವುಗಳನ್ನು ಲೇಖಕರೇ ಒದಗಿಸಬೇಕು. ಸಂಬಂಧಪಟ್ಟ ಆಕರ ಗ್ರಂಥಗಳ ಸಂಪೂರ್ಣ ವಿವರಗಳೊಂದಿಗೆ ಪಟ್ಟಿ ಇರಬೇಕು. ಪ್ರಬಂಧದ ವ್ಯಾಪ್ತಿಯು ಎ-4ರ ಆಕಾರದ ಹಾಳೆಯಲ್ಲಿ ಕನಿಷ್ಠ 150ಪುಟಗಳಾದರೂ ಇರಬೇಕು. ಫೆಲೋಷಿಪ್ ಪಡೆದುಕೊಂಡು ಸಿದ್ಧಪಡಿಸಿದ ಪ್ರಬಂಧಗಳನ್ನು ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು ಮೊದಲ ಮುದ್ರಣವಾಗಿ ಪ್ರಕಟಿಸುವ ಹಕ್ಕನ್ನು ಪಡೆದಿರುತ್ತದೆ.

ಸೂಕ್ತವಾದ ಪ್ರವೇಶಗಳು ಬಾರದೆ ಇದ್ದಲ್ಲಿ ಫೆಲೋಷಿಪ್‍ಗಳನ್ನು ತಡೆ ಹಿಡಿಯುವ ಹಕ್ಕು ಕರ್ನಾಟಕ ಶಿಲ್ಪಕಲಾ ಅಕಾಡೆಮಿಗೆ ಇರುತ್ತದೆ. ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಸದರಿ ಫೆಲೋಷಿಪ್‍ಗೆ ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಪಂಗಡದ ಅಭ್ಯಥಿಗಳು ನಿಗಧಿತ ಅರ್ಜಿ ನಮೂನೆಯನ್ನು ಕಚೇರಿಯ ವೇಳೆಯಲ್ಲಿ ಪಡೆದು ಅರ್ಜಿಯನ್ನು ಸಲ್ಲಿಸಬೇಕು.

ಸಂಪ್ರಬಂಧಕಾರರು ಫೆಲೋಷಿಪ್‍ಗಾಗಿ ತಮ್ಮ ಸ್ವ-ಪರಿಚಯವನ್ನು, ಕ್ಷೇತ್ರದಲ್ಲಿ ತಮಗಿರುವ ಅನುಭವವನ್ನು ದಾಖಲಿಸುತ್ತಾ, ಸಂಪ್ರಬಂಧದ ವಿಷಯದ ವಿವರ ಮತ್ತು ವ್ಯಾಪ್ತಿಯ ಬಗ್ಗೆ ಐದರಿಂದ-ಆರು ಪುಟಗಳಲ್ಲಿ ಪರಿಚಯವನ್ನು ಸಂಗ್ರಹಿಸಿ ಅರ್ಜಿಯನ್ನು ರಿಜಿಸ್ಟ್ರಾರ್, ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002 ಅಥವಾ ಅಕಾಡೆಮಿ ಅಂತರ್ಜಾಲ: www.karnatakashilpakalaacademy.org ಇಲ್ಲಿ ಸಹ ಪಡೆಯಬಹುದಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಕನಾಟಕ ಶಿಲ್ಪಕಲಾ ಅಕಾಡೆಮಿಗೆ ನವೆಂಬರ್ 13 ರ ಒಳಗಾಗಿ ಸಲ್ಲಿಸಬೇಕು.

(ಎನ್‍ಬಿಎನ್‍)

Leave a Reply

comments

Related Articles

error: