ಪ್ರಮುಖ ಸುದ್ದಿ

ಜೀವ ಭಯದಲ್ಲಿ ಕರ್ತವ್ಯ ನಿರ್ವಹಿಸಬೇಕಿದೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ

ಪ್ರಮುಖ ಸುದ್ದಿ, ತಿ.ನರಸೀಪುರ ಅ.೧೪: ಸೋಮನಾಥಪುರ ಪ್ರಾಥಮಿಕ ಆರೋಗ್ಯ ಕೇಂದ್ರ ಶಿಥಿಲಗೊಂಡು ಕುಸಿಯುವ ಹಂತಕ್ಕೆ ಬಂದು ನಿಂತಿದೆ. ಕರ್ತವ್ಯ ನಿರ್ವಹಿಸುವ ವೈದ್ಯರು ಹಾಗೂ ಸಿಬ್ಬಂದಿಗಳು ಜೀವ ಭಯದೊಂದಿಗೆ ಕಾರ್ಯನಿರ್ವಹಿಸಬೇಕಾಗಿದೆ. ಪರಿಸ್ಥಿತಿಯನ್ನು ಅವಲೋಕಿಸಿದ ಜಿಪಂ ಸದಸ್ಯ ಎಂ.ಅಶ್ವಿನ್ ಕುಮಾರ್ ಸ್ಥಳಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಬಸವರಾಜು ಅವರನ್ನು ಕರೆಯಿಸಿ ತುರ್ತು ಕ್ರಮ ವಹಿಸುವಂತೆ ತಿಳಿಸಿದರು.
ಈ ವೇಳೆ ಮಾತನಾಡಿದ ಜಿಪಂ ಸದಸ್ಯ ಅಶ್ವಿನ್ ಕುಮಾರ್, ಸೋಮನಾಥಪುರ ಗ್ರಾಮ ಜಿಲ್ಲಾ ಪಂಚಾಯಿತಿಗೆ ನಾನು ಪ್ರತಿನಿಧಿಸಿ ಅಯ್ಕೆಯಾಗಿರುವ ಕ್ಷೇತ್ರವಾಗಿದ್ದು ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಸ್ವತಂತ್ರ್ಯ ಪೂರ್ವದ್ದಾಗಿದ್ದು ನಿರ್ವಹಣೆ ಇಲ್ಲದೆ ಶಿಥಿಲಗೊಂಡಿದೆ. ಕಳೆದ ೨, ೩ ದಿನಗಳಿಂದ ಭಾರಿ ಮಳೆ ಬೀಳುತ್ತಿರುವ ಪರಿಣಾಮ ಕಟ್ಟಡದ ಸುತ್ತ ನೀರು ಶೇಖರಣೆಗೊಂಡಿದೆ. ಇದರಿಂದ ಗೋಡೆಗಳಲ್ಲಿ ನೀರು ಜಿನುಗುತ್ತಿದ್ದು. ಬಿರುಕು ಬಿಟ್ಟಿವೆ. ಕಟ್ಟಡದ ಮೇಲ್ಛಾವಣಿ ಮರ್ದಾಸ್ ಆರ್‌ಸಿಸಿ ಯಾಗಿದ್ದು ನೀರು ನಿಂತ ಕಾರಣ ಸೋರಿಕೆಯಾಗಿ ಔಷಧಿ, ಪೀಠೋಪಕರಣ, ಪ್ರಿಂಟರ್ ಸೇರಿದಂತೆ ಹಲವು ಪರಿಕರಗಳು ನೀರಿನಿಂದ ಒದ್ದೆಯಾಗಿ ಹಾಳಾಗಿದೆ ಎಂದರು.
ಡಿಎಚ್‌ಓ ಬಸವರಾಜು ಮಾತನಾಡಿ, ಅಸ್ಪತ್ರೆ ಶಿಥಿಲಗೊಂಡಿರುವುದನ್ನು ಸದಸ್ಯರೊಂದಿಗೆ ಪರಿಶೀಲಿಸಿzನೆ. ಈ ಕಟ್ಟಡ ಪುರಾತತ್ವ ಇಲಾಖೆಗೆ ಒಳಪಟ್ಟ ಶ್ರೀ ಚನ್ನಕೇಶವ ದೇವಾಲಯದ ಪಕ್ಕದಲ್ಲಿದ್ದು ಇದರ ಸಾಧಕ ಬಾದಕಗಳನ್ನು ಕಲೆಯಾಕಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಜರೂರಾಗಿ ನೂತನ ಕಟ್ಟಡವನ್ನು ಪ್ರಾರಂಭಿಸಲು ಕ್ರಮ ವಹಿಸುತ್ತೇನೆಂದರು.
ಈ ಸಂದರ್ಭದಲ್ಲಿ ಡಾ.ದಿಕ್ಷಾಪೈ, ಶೂಶ್ರಕಿಯರಾದ ನೇತ್ರಾವತಿ, ಕಿ.ಮಾ.ಆಶಾ, ಸೌಮ್ಯಾರಾಣಿ, ಹರೀಶ್, ಮುಖಂಡರಾದ ಎಸ್.ಸಿ.ಗಣೇಶ್, ಜೈರಾಮ್, ಮಾಜಿ ಗ್ರಾಪಂ ಅಧ್ಯಕ್ಷ ಪುಟ್ಟಸ್ವಾಮಿ, ತಾಲೂಕು ಜೆಡಿಎಸ್ ಸಂಘಟನಾ ಕಾರ್ಯದರ್ಶಿ ಅಬ್ದುಲ್‌ಅಥಿಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

 

Leave a Reply

comments

Related Articles

error: