ಪ್ರಮುಖ ಸುದ್ದಿ

ನೋವಾಗಿದ್ದರೆ ಕ್ಷಮಿಸಿ: ರೋಷನ್ ಬೇಗ್ ಕ್ಷಮೆಯಾಚನೆ

ಪ್ರಮುಖ ಸುದ್ದಿ, ಬೆಂಗಳೂರು, ಅ.೧೪: ಪ್ರಧಾನಿಯನ್ನು ನಿಂದಿಸುವ ಉzಶ ಇರಲಿಲ್ಲ. ನನ್ನಿಂದ ಯಾರ ಭಾವನೆಗಳಿಗಾದರೂ ಧಕ್ಕೆಯಾಗಿದ್ದರೆ ಕ್ಷಮಿಸಿ. ಮೋದಿಯವರು ಬಿಜೆಪಿಯವರಿಗಷ್ಟೇ ಪ್ರಧಾನಿಯಲ್ಲ, ದೇಶದ ಪ್ರಧಾನಿ ಎಂದು ಸಚಿವ ರೋಷನ್ ಬೇಗ್ ಕ್ಷಮೆಯಾಚಿಸಿದ್ದಾರೆ.
ಪುಲಿಕೇಶಿನಗರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ರೋಷನ್ ಬೇಗ್ ಪ್ರಧಾನಿ ನರೇಂದ್ರ ಮೋದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಇದಕ್ಕೆ ರಾಜ್ಯಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದಕ್ಕೆ ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸಿರುವ ರೋಷನ್ ಬೇಗ್, ನಾನು ೬ ಬಾರಿ ಶಾಸಕನಾಗಿzನೆ. ನನ್ನ ವೃತ್ತಿಜೀವನದಲ್ಲಿ ಯಾರನ್ನೂ ಹೀಯಾಳಿಸಿಲ್ಲ. ನನಗೆ ಅಲ್ಪ ಸ್ವಲ್ಪ ತಮಿಳು ಬರುತ್ತದೆ. ತಮಿಳಿನಲ್ಲಿ ಪಾಂಡಿತ್ಯ ಇಲ್ಲದ ಕಾರಣ ಕೆಲವು ಪದಗಳನ್ನು ಅನುಚಿತವಾಗಿ ಬಳಸಿರಬಹುದು. ನನಗೆ ನಮ್ಮ ದೇಶದ ಪ್ರಧಾನಿ ಮೇಲೆ ಗೌರವವಿದೆ. ಹೀಗಾಗಿ ನಾನು ಎಂದಿಗೂ ಅಂತಹ ಪದಗಳನ್ನು ಬಳಸುವುದಿಲ್ಲ. ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ ಎಂದು ಕ್ಷಮೆ ಕೇಳಿದ್ದಾರೆ. (ವರದಿ ಬಿ.ಎಂ)

 

Leave a Reply

comments

Related Articles

error: