ಕರ್ನಾಟಕಮೈಸೂರು

ಕರ್ನಾಟಕಕ್ಕೆ ಬಂದು ಬೀಳುತ್ತಿರುವ ಕೇರಳದ ತ್ಯಾಜ್ಯ: ಚೆಕ್ ಪೋಸ್ಟ್ ಗಳಲ್ಲಿ ಹದ್ದಿನ ಕಣ್ಣಿಡಲು ಎಸ್‍ಪಿ ಸೂಚನೆ

ಸದ್ದಿಲ್ಲದೇ ಕೇರಳದ ತ್ಯಾಜ್ಯ ಇದೀಗ ಕರ್ನಾಟಕದೊಳಕ್ಕೆ ಬಂದು ಬೀಳುತ್ತಿರುವ ಅಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ. ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಬೀಚನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ತ್ಯಾಜ್ಯ ತುಂಬಿದ್ದ 5 ಲಾರಿಗಳನ್ನ ಪೊಲೀಸರು ಈಗ್ಗೆ ನಾಲ್ಕು ದಿನಗಳ ಹಿಂದೆ ವಶಕ್ಕೆ ಪಡೆದಿದ್ದರು. ಇದನ್ನು ಕರ್ನಾಟಕದ ಗಡಿಭಾಗದಲ್ಲಿ ಸುರಿಯಲು ಸಿದ್ಧತೆ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.

webnew-2

ನಿತ್ಯವೂ ಕಸ ತುಂಬಿಕೊಂಡ ಲಾರಿಗಳು ಕೇರಳದ ಬಾವಾಲಿ ಚೆಕ್-ಪೋಸ್ಟ್ ಮುಖಾಂತರ ಕರ್ನಾಟಕ ಗಡಿಯೊಳಗೆ ಬಂದು ಈ ಕಸವನ್ನ ಸುರಿದು ಹೋಗುತ್ತಿದ್ದವು ಎನ್ನಲಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣದ ಬೆನ್ನು ಹತ್ತಿದ ಪೊಲೀಸರು, ಕಸ ತುಂಬಿಕೊಂಡು ಕರ್ನಾಟಕ ಪ್ರವೇಶಿಸಿದ ಲಾರಿಗಳನ್ನು ಕಸ ಸುರಿಯುವ ಸ್ಥಳದಲ್ಲೇ ತಡೆದು ಲಾರಿಗಳನ್ನು ವಶಕ್ಕೆ ಪಡೆದು ಮತ್ತು ನೌಕರರನ್ನು ಬಂಧಿಸಿದ್ದಾರೆ.

ಈ ನೌಕರರನ್ನು ಕರ್ನಾಟಕ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ “ನಮ್ಮದೇನೂ ತಪ್ಪಿಲ್ಲ. ನಮಗೆ ನಿಗದಿಪಡಿಸಿರುವ ಜಾಗದಲ್ಲೇ ನಾವು ಕಸ ಸುರಿಯುತ್ತಿದ್ದೇವೆ ಎಂದು ಹೇಳಿಕೆ ನೀಡಿದ್ದರು. ಹೀಗಾಗಿ ಇವರ ಮೇಲೆ ಯಾವುದೇ ಮೊಕದ್ದಮೆ ದಾಖಲಿಸಿರಲಿಲ್ಲ. ಆದರೆ ಇವರು ಕೇರಳದಿಂದ ಕಸ ತಂದು ಸುರಿಯುತ್ತಿರುವ ವಿಚಾರ ವಿಚಾರಣೆಯಿಂದ ಧೃಢಪಟ್ಟ ನಂತರ ಇವರುಗಳ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದ್ದು ಗಡಿ ಭಾಗದಲ್ಲಿ ತ್ಯಾಜ್ಯ ತರುವ ಲಾರಿಗಳನ್ನು ವಶಕ್ಕೆ ತೆಗೆದುಕೊಳ್ಳುವಂತೆ ಆದೇಶಿಸಲಾಗಿದೆ.

webnew-3

ಗಡಿಭಾಗ ಹಾಗೂ ಚೆಕ್ ಪೋಸ್ಟ್ ಗಳಲ್ಲಿ ಹದ್ದಿನ ಕಣ್ಣು !

ಗಡಿ ಭಾಗದಲ್ಲಿ ಹದ್ದಿನ ಕಣ್ಣಿಟ್ಟಿರುವಂತೆ ತನ್ನ ಜಿಲ್ಲೆಯ ಪೊಲೀಸ್ ಸಿಬ್ಬಂದಿಗಳಿಗೆ ನೂತನ ಜಿಲ್ಲಾ ವರಿಷ್ಠಾಧಿಕಾರಿಗಳಾದ ರವಿ ಡಿ ಚೆನ್ನಣ್ಣನವರ್ ಅವರು ಆದೇಶ ನೀಡಿದ್ದರು. ಈ ಆದೇಶದ ಜೊತೆಗೆ ಕಾರ್ಯಚರಣೆಗಿಳಿದ ಪೊಲೀಸರಿಗೆ ಈ ರಕ್ಕಸ ಕಸದ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರ ಪ್ರಾಥಮಿಕ ತನಿಖೆಯಿಂದ ಲಾರಿ ಚಾಲಕರು ಗುತ್ತಿಗೆ ನೌಕರರಾಗಿದ್ದು, 5 ಲಾರಿಗಳೊಟ್ಟಿಗೆ ಲಾರಿ ಚಾಲಕರನ್ನು ಸಹ ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ. ಜೊತೆಯಲ್ಲಿ ಗಡಿಭಾಗ ಹಾಗೂ ಚೆಕ್ ಪೋಸ್ಟ್ ಅಲ್ಲಿ ಮತ್ತಷ್ಟು ಹೆಚ್ಚಿನ ನಿಗಾ ವಹಿಸಿ, ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಲಾಗುವುದೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ ಚೆನ್ನಣ್ಣನವರ್ ಅವರು ‘ಸಿಟಿಟುಡೆ’ಗೆ ತಿಳಿಸಿದ್ದಾರೆ.

~ ಸುರೇಶ್ ಎನ್.

Leave a Reply

comments

Related Articles

error: