ಕರ್ನಾಟಕ

ಗುಡಿ-ಗೋಪುರಗಳು ನಮ್ಮ ಭಾರತೀಯ ಸಂಸ್ಕೃತಿ-ಪರಂಪರೆಯ ಪ್ರತಿಬಿಂಬ : ಮಾಜಿ ಸ್ಪೀಕರ್ ಕೃಷ್ಣ

ರಾಜ್ಯ(ಮಂಡ್ಯ).14:- ದೇವಾಲಯಗಳು ಹಾಗೂ ಗುಡಿ-ಗೋಪುರಗಳು ನಮ್ಮ ಭಾರತೀಯ ಸಂಸ್ಕೃತಿ-ಪರಂಪರೆಯ ಪ್ರತಿಬಿಂಬಗಳಾಗಿವೆ ಹಾಗಾಗಿ ಅವುಗಳನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು  ಕರ್ನಾಟಕ ವಿಧಾನಸಭೆಯ ಮಾಜಿ ಸ್ಪೀಕರ್ ಕೃಷ್ಣ ಹೇಳಿದರು.

ಅವರು ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಚೊಟ್ಟನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ದಾನಿಗಳಾದ ಎಸ್.ಆರ್.ಸವಿತಾ ಮತ್ತು ಎ.ಎಂ.ಮಂಜುನಾಥ್ ಸ್ನೇಹಿತರ ನೆರವು ಹಾಗೂ ಇತರೆ ಭಕ್ತಾದಿಗಳ ನೆರವಿನಿಂದ ಸುಮಾರು 80ಲಕ್ಷ ರೂಗಳ ವೆಚ್ಚದಲ್ಲಿ ನೂತನವಾಗಿ ಪುನರ್ ನಿರ್ಮಿಸಿರುವ ಶ್ರೀ ಲಕ್ಷ್ಮೀದೇವಿ ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ದಾನಿಗಳನ್ನು ಸನ್ಮಾನಿಸಿ ಮಾತನಾಡಿದರು. ಮನುಷ್ಯನಿಗೆ ಬೇಕಾಗಿರುವ ಶಾಂತಿ-ನೆಮ್ಮದಿಯನ್ನು ಮಾರುಕಟ್ಟೆಯಲ್ಲಿ ಕೊಂಡುಕೊಳ್ಳಲು ಸಾಧ್ಯವಿಲ್ಲ. ಕೇವಲ ಧಾರ್ಮಿಕ ಆಚರಣೆಗಳು, ಧಾನ-ಧರ್ಮಗಳಿಂದ ಮಾತ್ರ ಸಾಧ್ಯ ಆದ್ದರಿಂದ ನಮ್ಮ ಸಂಸ್ಕೃತಿ ಉಳಿಸಿ ನಮಗೆ ನೆಮ್ಮದಿಯನ್ನು ನೀಡುವ ಗುಡಿ-ಗೋಪುರಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸಲು ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು. ಶಾಸಕ ಕೆ.ಸಿ.ನಾರಾಯಣಗೌಡ ದೇವಾಲಯವನ್ನು ಉದ್ಘಾಟಿಸಿದರು. ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ.ಸದಸ್ಯರಾದ ಬಿ.ಎಲ್.ದೇವರಾಜು, ತಾ.ಪಂ.ಉಪಾಧ್ಯಕ್ಷ ಜಾನಕೀರಾಂ, ರಾಜ್ಯ ಕಿಯೊನೆಕ್ಸ್ ನಿಗಮದ ನಿರ್ದೇಶಕ ಎ.ಎಸ್.ಮಂಜುನಾಥ್, ಟಿಎಪಿಸಿಎಂಎಸ್ ಅಧ್ಯಕ್ಷ ಎ.ಎಸ್.ಶ್ರೀಧರ್, ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ವಿ.ಡಿ.ಹರೀಶ್, ಮನ್‍ಮುಲ್ ನಿರ್ದೇಶಕರಾದ ಎಸ್.ಅಂಬರೀಷ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: