ಮೈಸೂರು

ಮಾನವನಲ್ಲಿ ದೇವತ್ವವನ್ನು ಕಾಣುವ ಗುಣ ಶ್ರೀಗಳಲ್ಲಿತ್ತು : ಸುತ್ತೂರು ಶ್ರೀಗಳನ್ನು ಸ್ಮರಿಸಿದ ಪ್ರೊ. ಜಿ.ಎನ್. ರೇಚಣ್ಣ

ಮೈಸೂರು ಅ. 14:- ಸುತ್ತೂರು ಜೆಎಸ್‍ಎಸ್ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ  ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 102ನೇ ಜಯಂತಿ ಮಹೋತ್ಸವವನ್ನು ಆಚರಿಸಲಾಯಿತು.

ನುಡಿನಮನ ಸಲ್ಲಿಸಿದ ಮೈಸೂರಿನ ನಿವೃತ್ತ ಪ್ರಾಧ್ಯಾಪಕ ಪ್ರೊ. ಜಿ.ಎನ್. ರೇಚಣ್ಣ, ಡಾ. ರಾಜೇಂದ್ರ ಶ್ರೀಗಳವರು ಆಧುನಿಕ ಸಂತರು, ಅವರ ವ್ಯಕ್ತಿತ್ವ ಅನುಪಮವಾದುದು. ಶಿವಗುರು ಹಾಗೂ ಲಿಂಗ ಪೂಜಾ ನಿಷ್ಠರಾಗಿದ್ದ ಶ್ರೀಗಳು ತಮ್ಮ ಪೂಜಾ ಫಲವನ್ನೆಲ್ಲಾ ಲೋಕ ಕಲ್ಯಾಣಕ್ಕೆ ಧಾರೆ ಎರೆದರು. ತನ್ಮಯತೆ ಮತ್ತು ಏಕಾಗ್ರತೆ ಅವರ ಪೂಜಾ ವೈಶಿಷ್ಟವಾಗಿದ್ದವು. ಮಾನವನಲ್ಲಿ ದೇವತ್ವವನ್ನು ಕಾಣುವ ಗುಣ ಶ್ರೀಗಳಲ್ಲಿತ್ತು ಎಂದು ಸ್ಮರಿಸಿದರು.

ಅಧ್ಯಕ್ಷತೆ ವಹಿಸಿದ್ದ ಹುಣಸೂರಿನ ಮಾದಹಳ್ಳಿಯ ಉಕ್ಕಿನಕಂತೆ ಮಠದ ಸಾಂಬಸದಾಶಿವ ಸ್ವಾಮಿಗಳು ಮಾತನಾಡಿ, ರಾಜೇಂದ್ರ ಶ್ರೀಗಳ ಜಯಂತಿಯ ಮೂಲಕ ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ತತ್ವಗಳನ್ನು ಪಾಲಿಸಬೇಕು. ವಿದ್ಯೆ, ಅನ್ನ, ಆರೋಗ್ಯ ಕ್ಷೇತ್ರಕ್ಕೆ ಶ್ರೀಗಳ ಕೊಡುಗೆ ಅಪಾರ. ವಿದ್ಯಾರ್ಥಿ ಸಮುದಾಯದ ಬಗ್ಗೆ ಅವರು ಕಂಡ ಕನಸು ನನಸಾಗಬೇಕಾದರೆ ನೀವೆಲ್ಲಾ ಶ್ರದ್ದೆಯಿಂದ ಓದಿ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕೆಂದು ನುಡಿದರು.  ಈ ಸಂದರ್ಭ ಚಾಮರಾಜನಗರದ ನೀರಾವರಿ ಇಲಾಖೆಯ ಸಹಾಯಕ ಅಭಿಯಂತರ ಎನ್. ರಾಜೇಂದ್ರ ಪ್ರಸಾದ್‍, ಸಂಸ್ಥೆಯ ಮುಖ್ಯಸ್ಥರುಗಳಾದ ಜಿ.ಎಲ್. ತ್ರಿಪುರಾಂತಕ, ಸಂಪತ್ತು,  ವೀರಭದ್ರಯ್ಯ, ಡಾ.ಎಂ.ಸಿ.ನಟರಾಜ, ಡಾ. ಅರುಣ್ ಬಳಮಟ್ಟಿ, ಎನ್. ನಟರಾಜು,   ಜಿ.ಶಿವಮಲ್ಲು, ಬಿ.ಎಂ. ಸಿದ್ದಪ್ಪ, ಸಿ.ಪಿ.ನಿರ್ಮಲ, ಹಾಗೂ ಜಿ.ಎಂ.ಷಡಕ್ಷರಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಬೆಂಗಳೂರಿನ ಡೈರಿ ಡೇ ಐಸ್‍ಕ್ರೀಂ ಸಂಸ್ಥೆಯ ಶಿವಶಂಕರ್‍ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಐಸ್‍ಕ್ರೀಂ ವಿತರಿಸಿದರು. (ಎಸ್.ಎಚ್)

Leave a Reply

comments

Related Articles

error: