ಮೈಸೂರು

ರವಿ ನಿವಾಸಕ್ಕೆ ಶಾಸಕ ಸಿಟಿ ರವಿ ಭೇಟಿ

ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಬಿಜೆಪಿ ಮುಖಂಡ ಮಾಗಳಿ ರವಿ ನಿವಾಸಕ್ಕೆ ರಾಜ್ಯ ಬಿಜೆಪಿ ಮುಖಂಡ, ಚಿಕ್ಕಮಗಳೂರು ಶಾಸಕ ಸಿಟಿ ರವಿ ಭೇಟಿ ನೀಡಿದರು.

ಶುಕ್ರವಾರ ರಾತ್ರಿ ಮಾಗಳಿ ರವಿಯವರ ಶವ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮಾಗಳಿ ಗ್ರಾಮದ ಹೊರವಲಯದಲ್ಲಿ ತಲೆಗೆ ತೀವ್ರ ಪೆಟ್ಟಾದ ರೀತಿಯಲ್ಲಿ ಪತ್ತೆಯಾಗಿತ್ತು. ರವಿಯನ್ನು ಕಳೆದುಕೊಂಡ ದುಃಖತಪ್ತ ಕುಟುಂಬವನ್ನು ಬಿಜೆಪಿ ಮುಖಂಡ ಸಿಟಿ ರವಿ ಭೇಟಿ ಮಾಡಿ ಸಾಂತ್ವನ ಹೇಳಿದರು. ನಿಮ್ಮೊಂದಿಗೆ ನಾವಿದ್ದೇವೆ. ಧೈರ್ಯ ಕಳೆದುಕೊಳ್ಳದಿರಿ ಎಂದು ಹೇಳಿದರು.

Leave a Reply

comments

Related Articles

error: