
ಪ್ರಮುಖ ಸುದ್ದಿಮೈಸೂರು
ಕರಾಮುವಿ ಮಾನ್ಯತೆ ನವೀಕರಣಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಪತ್ರ
ಮೈಸೂರು,ಅ.15:- ಕರಾಮುವಿ ಮಾನ್ಯತೆ ನವೀಕರಣ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ಪ್ರಧಾನ ಮಂತ್ರಿಗಳಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪತ್ರ ಬರೆದಿದ್ದಾರೆ.
ಯುಜಿಸಿ ಮಾನ್ಯತೆ ನವೀಕರಣಕ್ಕೆ ಮನವಿ ಸಲ್ಲಿಸಿದ್ದು ಕೇಂದ್ರಸಚಿವ ಪ್ರಕಾಶ್ ಜಾವ್ಡೇಕರ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಉಳಿಸಿ, ನೂರಾರು ನೌಕರರ ಹುದ್ದೆಯನ್ನು ರಕ್ಷಿಸಿ ಎಂದು ಟ್ವಿಟರ್ ನಲ್ಲಿ ಕೂಡ ಮನವಿ ಮಾಡಿದ್ದಾರೆ . (ಕೆ.ಎಸ್,ಎಸ್.ಎಚ್)