
ಮೈಸೂರು
ಮರಕ್ಕೆ ಡಿಕ್ಕಿಯಾದ ಕಾರು ವಿಜಯವಾಣಿ ಪತ್ರಿಕೆ ಮೈಸೂರು ಆವೃತ್ತಿಯ ಉಪಸಂಪಾದಕ ಸಾವು
ಮೈಸೂರು,ಅ.15:-ಕಾರು ಅಪಘಾತದಲ್ಲಿ ವಿಜಯವಾಣಿ ಪತ್ರಿಕೆಯ ಮೈಸೂರು ಆವೃತ್ತಿಯ ಉಪಸಂಪಾದಕ ಹಾಗೂ ಅವರ ಸಂಬಂಧಿ ಮಹಿಳೆಯೋರ್ವರು ಸಾವನ್ನಪ್ಪಿದ ಘಟನೆ ಮೈಸೂರಿನ ಟಿ.ನರಸೀಪುರ ಬಳಿ ನಡೆದಿದೆ.
ಮೈಸೂರಿನ ವಿಜಯವಾಣಿ ಪತ್ರಿಕೆಯ ಉಪಸಂಪಾದಕರಾಗಿದ್ದ ಎಂ.ಜಿ.ರಾಜೇಶ್ ಹಾಗೂ ಅವರ ಸಂಬಂಧಿ ಮಹಿಮಾ ಎಂಬವರೇ ದುರ್ಘಟನೆಯಲ್ಲಿ ಸಾವನ್ನಪ್ಪಿದವರಾಗಿದ್ದಾರೆ. ಮರಕ್ಕೆ ಕಾರು ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ರಾಜೇಶ್ ಮೃತಪಟ್ಟಿದ್ದಾರೆ. ಕುಟುಂಬ ಸದಸ್ಯರೊಂದಿಗೆ ಕಾರಿನಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿದ್ದಾರೆ. ರಾಜೇಶ್ ಮೈಸೂರು ಪತ್ರಕರ್ತರ ಸಂಘದ ಸದಸ್ಯರೂ ಆಗಿದ್ದರು. ಮೃತರ ಪಾರ್ಥಿವ ಶರೀರವನ್ನು ತಿ.ನರಸೀಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ನಾಳೆ ಬೆಳಗ್ಗೆ ಮರಣೋತ್ತರ ಪರೀಕ್ಷೆ ನಡೆದ ಬಳಿಕ ಮೈಸೂರಿಗೆ ತರಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.