ಮೈಸೂರು

ಯೋಗವಿರುವಲ್ಲಿ ರೋಗವಿರುವುದಿಲ್ಲ : ರಾಘವೇಶ್ವರ ಶ್ರೀ

ಬೆಳಕು ಇರುವಲ್ಲಿ ಹೇಗೆ ಕತ್ತಲೆ ಇರುವುದಿಲ್ಲವೋ ಹಾಗೆಯೇ ಯೋಗವಿರುವಲ್ಲಿ ರೋಗವಿರುವುದಿಲ್ಲ ಎಂದು ಶಿವಮೊಗ್ಗದ ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಮಹಾಸ್ವಾಮೀಜಿ ಹೇಳಿದರು.

ಮೈಸೂರಿನ ಉತ್ತನಹಳ್ಳಿಯ ವಿಜಯಗಿರಿ ಭಾರತೀಯೋಗಧಾಮದ ಸದ್ವಿದ್ಯಾಭವನದಲ್ಲಿ ಎರಡು ದಿನಗಳ ಕಾಲ ನಡೆದ ಯೋಗ ಮತ್ತು ಮನೋರೋಗ ರಾಜ್ಯ ಮಟ್ಟದ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ದಿವ್ಯ ಸಾನಿಧ್ಯವಹಿಸಿದ್ದ ರಾಘವೇಶ್ವರಶ್ರೀಗಳು ಮಾತನಾಡಿದರು.  ಯೋಗ ಮತ್ತು ರೋಗದಲ್ಲಿ ಒಂದಕ್ಷರ ಮಾತ್ರ ವ್ಯತ್ಯಾಸ. ಅವೆರಡನ್ನೂ ವಿಶ್ಲೇಷಿಸಿದರೆ ಅವುಗಳಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಯೋಗ ಮತ್ತು ರೋಗವನ್ನು ಬೆಳಕು ಮತ್ತು ಕತ್ತಲೆಗೆ ಹೋಲಿಸಬಹುದಾಗಿದ್ದು, ಬೆಳಕು ಇರುವಲ್ಲಿ ಹೇಗೆ ಕತ್ತಲೆ ಇರುವುದಿಲ್ಲವೋ, ಹಾಗೇ ಯೋಗವಿರುವಲ್ಲಿ ರೋಗವಿರುವುದಿಲ್ಲ ಎಂದು ತಿಳಿಸಿದರು.

ಅನೇಕ ವ್ಯಾಧಿಗಳಿಗೆ ಯೋಗವು ಪರಿಹಾರವಾಗಿದ್ದು, ಮೈಸೂರಿನ ಭಾರತೀಯೋಗಧಾಮವು ಯೋಗದ ಕುರಿತಾಗಿ ಉತ್ತಮ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಭಾರತೀ ಯೋಗಧಾಮದ ಮೂಲಕ ಯೋಗ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಕೊಡುಗೆ ಸಿಗುವಂತಾಗಲಿ ಎಂದು ಹಾರೈಸಿದರು.

ವೇದಿಕೆಯಲ್ಲಿ ಕೆ.ಎಲ್.ಶಂಕರನಾರಾಯಣ ಜೋಯ್ಸ್ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಎರಡು ದಿನಗಳ ಕಾಲ ನಡೆದ ವಿಚಾರ ಸಂಕಿರಣದಲ್ಲಿ ಯೋಗ ಸಂಬಂಧಿತ ಹಲವಾರು ವಿಷಯಗಳ ಕುರಿತು ಅನೇಕ ತಜ್ಞರು ಮಾತನಾಡಿದರು. ವಿವಿಧೆಡೆಯಿಂದ ಆಗಮಿಸಿದ ಯೋಗಾಸಕ್ತರು ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಂಡರು.

 

 

Leave a Reply

comments

Related Articles

error: