ಕರ್ನಾಟಕ

ಕಾವೇರಿ ತಿರ್ಥೋದ್ಬವ ಹಿನ್ನೆಲೆ: ಕಾವೇರಿ ಮಾತೆಗೆ ತೊಡಿಸುವ ಆಭರಣಗಳ ಮೆರವಣಿಗೆ

ಮಡಿಕೇರಿ,ಅ.16-ತಲಕಾವೇರಿಯಲ್ಲಿ ಮಂಗಳವಾರ ಜರುಗುವ ಕಾವೇರಿ ಪವಿತ್ರ ತಿರ್ಥೋದ್ಬವದ ಹಿನ್ನೆಲೆಯಲ್ಲಿ ತುಲಾ ಸಂಕ್ರಮಣದಲ್ಲಿ ಕಾವೇರಿ ಮಾತೆಗೆ ತೊಡಿಸುವ ಚಿನ್ನಾಭರಣವನ್ನು ಶ್ರೀ ಭಗಂಡೇಶ್ವರ ದೇವಾಲಯದಿಂದ ತಲಕಾವೇರಿ ಕ್ಷೇತ್ರಕ್ಕೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.

ದೇವಾಲಯದ ಆಡಳಿತಾಧಿಕಾರಿ ಜಗದೀಶ್ ಅವರಿಂದ ಚಿನ್ನಾಭರಣಗನ್ನು ದೇವಾಲಯ ತಕ್ಕರಾದ ಕೋಡಿ ಮೋಟಯ್ಯ ಅವರಿಗೆ ಹಸ್ತಾಂತರ ಮಾಡಲಾಯಿತು. ಶ್ರೀ ಭಾಗಮಂಡಲ ದೇವಾಲಯದಲ್ಲಿ ಆಭರಣಗಳಿಗೆ ವಿಶೇಷ ಪೂಜೆ ನೆರವೇರಿಸಿದರು. ಭಗಂಡೇಶ್ವರ ದೇವಾಲಯದಿಂದ ಚಂಡೆ ವಾದ್ಯದೊಂದಿಗೆ ಮೆರವಣಿಗೆ ಮೂಲಕ ಭಾಗಮಂಡಲ ಮಾರುಕಟ್ಟೆ ಬಳಿಗೆ ತೆರಳಿ ನಂತರ ಕೈಲಾಸ ಆಶ್ರಮದ ಬಳಿಯಿಂದ ತಲಕಾವೇರಿಗೆ ಸಾಗಿ ತಲಕಾವೇರಿಯಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ತುಲಾಮಾಸದಲ್ಲಿ ಒಂದು ತಿಂಗಳ ಕಾಲ ಈ ಆಭರಣವನ್ನು ಕಾವೇರಿ ಮಾತೆಗೆ ತೊಡಿಸಲಾಗುತ್ತಿದೆ. 1 ತಿಂಗಳು ಕಳೆದ ತರುವಾಯ ಈ ಚಿನ್ನಾಭರಣಗಳನ್ನು ನವೆಂಬರ್ 17ರಂದು ಮರಳಿ ಆಡಳಿತಾಧಿಕಾರಿಗೆ ಹಿಂತಿರುಗಿಸಲಾಗುವುದು.

ಚಿನ್ನಾಭರಣಗಳನ್ನು ಕೊಂಡೊಯ್ಯುವ ಮೆರವಣಿಗೆಯಲ್ಲ್ಲಿ ಭಾಗಮಂಡಲ ಗೌಡ ಸಮಾಜ ಕೊಡಗು ಗೌಡ ಸಮಾಜದ ಒಕ್ಕೂಟದ ಪದಾಧಿಕಾರಿಗಳು , ಕೊಡಗು ಗೌಡ ಸಮಾಜದ ಸದಸ್ಯರು, ಕೊಡಗು – ಬೆಂಗಳೂರು ಗೌಡ ಸಮಾಜದ ಸದಸ್ಯರು, ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜದ ಪದಾಧಿಕಾರಿಗಳು ಗೌಡ ನಿವೃತ್ತ ನೌಕರರ ಸಂಘ, ಮಾಜಿ ಸೈನಿಕರ ಸಂಘ, ಕುಶಾಲನಗರ ಮತ್ತು ಸೋಮವಾರಪೇಟೆ ಗೌಡ ಸಮಾಜದ ಸದಸ್ಯರು, ಶ್ರೀಮಂಗಲ, ಯುವ ವೇದಿಕೆ, ವಿದ್ಯಾಸಂಸ್ಥೆಯ ಮಹಿಳಾ ಒಕ್ಕೂಟ, ಗುಡ್ಡಮನೆ ಅಪ್ಪಯ್ಯ ಸ್ಮಾರಕ ಸಮಿತಿ, ಮರಗೋಡು ಗೌಡ ಸಮಾಜದ ಪದಾಧಿಕಾರಿಗಳು ಭಾಗವಹಿಸಿದ್ದರು.

ದೇವಾಲಯದ ತಕ್ಕರಾದ ಬಲ್ಲಡ್ಕ ಅಪ್ಪಾಜಿ, ಸೂರ್ತಲೆ ಸೋಮಣ್ಣ, ಕುದುಪಜೆ ಪಳಂಗಪ್ಪ, ಪೇರಿಯನ ಜಯನಂದ, ಕೆಂಚಪ್ಪನ ಮೋಹನ, ಚಂದ್ರಶೇಖರ, ಕಾವೇರಮ್ಮ ಸೋಮಣ್ಣ, ಕುದುಪಜೆ ಪ್ರಕಾಶ್, ಕುದುಪಜೆ ಗಣೇಶ್, ಎ.ಆರ್.ಮುತ್ತಣ್ಣ, ದಂಬೆಕೋಡಿ ಆನಂದ, ಪೈಕೆರ ಮನೋಹರ್, ಕಟ್ಟೆಮನೆ ಜನಾರ್ಧನ, ಕಾಂಗೀರ ಸತೀಶ್, ಅನಂತರಾಂ ಪಾಲ್ಗೊಂಡಿದ್ದರು. (ವರದಿ-ಕೆಸಿಐ, ಎಂ.ಎನ್)

 

 

Leave a Reply

comments

Related Articles

error: