ಮೈಸೂರು

ಬೂತ್ ಅಧ್ಯಕ್ಷರ ಮನೆ ಮೇಲೆ ಬಿಜೆಪಿ ಧ್ವಜ ಹಾರಿಸುವ ಕಾರ್ಯಕ್ಕೆ ಚಾಲನೆ

ಮೈಸೂರು,ಅ.16-ಭಾರತೀಯ ಜನತಾ ಪಾರ್ಟಿಯ ರಾಷ್ಟ್ರಾಧ್ಯಕ್ಷರಾದ ಅಮಿತ್ ಶಾ ರವರ ಸೂಚನೆಯ ಮೇರೆಗೆ ಕರ್ನಾಟಕ ರಾಜ್ಯಾದ್ಯಂತ 54  ಸಾವಿರ  ಬೂತ್ ಗಳಲ್ಲಿ, ಬೂತ್  ಅಧ್ಯಕ್ಷರ ಮನೆಗಳ ಮೇಲೆ ಭಾರತೀಯ ಜನತಾ ಪಾರ್ಟಿಯ ಧ್ವಜವನ್ನು ಹಾರಿಸುವ ಕಾರ್ಯಕ್ಕೆ ಭಾನುವಾರ ಮಾಜಿ ಸಚಿವ ಎಸ್.ಎ.ರಾಮದಾಸ್ ಚಾಲನೆ ನೀಡಿದರು.

ಕೃಷ್ಣರಾಜ ಕ್ಷೇತ್ರದ  198ನೇ  ಬೂತಿನ ಅಧ್ಯಕ್ಷರಾದ ಚೇತನ್ ಕುಮಾರ್ ರವರ ಮನೆಯ ಮೇಲೆ ಬಿಜೆಪಿ ಧ್ವಜ ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೂಲಕ ಜನಸಾಮಾನ್ಯರಿಗೆ ಬೂತಿನ ಸಮಸ್ಯೆಗಳೇನೇ ಇದ್ದರೂ  ಬೂತಿನ ಅಧ್ಯಕ್ಷ ಹಾಗೂ ಕಚೇರಿ ಮೂಲಕ ಸಮಸ್ಯೆಗಳನ್ನು ಬಗೆ ಹರಿಸಲು ನಾವು ಸಿದ್ಧರಿದ್ದೇವೆ ಎಂಬ ಸಂದೇಶವನ್ನು ನೀಡಿದರು. ಇದೇ ಸಂದರ್ಭದಲ್ಲಿ ಪಂಡಿತ್ ದೀನ್ ದಯಾಳ್  ರವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.  ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಗೆ ಬರುವ ಎಲ್ಲ 223  ಬೂತ್ ಗಳಲ್ಲಿ  ಅಲ್ಲಿಯ ಬೂತ್ ಅಧ್ಯಕ್ಷರ ಮನೆಯ ಮೇಲೆ ಬಿಜೆಪಿ ಧ್ವಜ ಹಾರಿಸುವ ಕಾರ್ಯ ಈಗಾಗಲೇ ಪ್ರಾರಂಭವಾಗಿದ್ದು , ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನು ದೇಶಕ್ಕೆ, ರಾಜ್ಯಕ್ಕೆ, ಜನ ಸಾಮಾನ್ಯರ ಸೇವೆಗೆ ಸದಾ ಸಿದ್ದರಿದ್ದೇವೆ  ಎಂದು ಧ್ವಜ ಹಾರಿಸುವ ಮೂಲಕ ಸಂಕಲ್ಪ ಮಾಡುತ್ತಿದ್ದೇವೆ ಎಂಬುದನ್ನು  ತಿಳಿಸಿದರು.

ಈ ಸಂದರ್ಭದಲ್ಲಿ ನಗರ ಪಾಲಿಕೆ ಸದಸ್ಯರೂ ಹಾಗೂ ಕೃಷ್ಣರಾಜ ಕ್ಷೇತ್ರದ ಅಧ್ಯಕ್ಷರಾದ ಬಿ.ವಿ.ಮಂಜುನಾಥ್, ನಗರ ಪಾಲಿಕೆ ಸದಸ್ಯರಾದ ಮ.ವಿ.ರಾಮಪ್ರಸಾದ್,  ಮಾಜಿ  ನಗರಪಾಲಿಕೆ ಸದಸ್ಯರಾದ  ವಿದ್ಯಾಅರಸ್, ಸೌಭಾಗ್ಯ ಮೂರ್ತಿ, ಕ್ಷೇತ್ರದ ಉಪಾಧ್ಯಕ್ಷರಾದ ಶಿವಪ್ರಕಾಶ್, ಟಿ.ಪಿ.ರಮೇಶ್, ಪುರಷೋತ್ತಮ್ , ವಾರ್ಡ್ ಪದಾಧಿಕಾರಿಗಳಾದ  ಸಂದೀಪ್, ದಿನೇಶ್, ಎಸ್. ಟಿ.ಡಿ ಮಂಜು,  ಹರ್ಷ , ನಿತಿನ್, ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಮೊಹಲ್ಲಾ ನಿವಾಸಿಗಳು ಉಪಸ್ಥಿತರಿದ್ದರು. (ವರದಿ-ಎಚ್.ಎನ್, ಎಂ.ಎನ್)

Leave a Reply

comments

Related Articles

error: