ಕರ್ನಾಟಕಮನರಂಜನೆ

ಬಿಗ್‍ಬಾಸ್ ಮನೆಗೆ ಬಿಗ್ ಎಂಟ್ರಿ ಕೊಟ್ಟ ಸಾಮಾನ್ಯರು

 ‘ಬಿಗ್ ಬಾಸ್’ ಮನೆಗೆ ಸ್ಪರ್ಧಿಗಳ  ಗೃಹಪ್ರವೇಶದ ನಂತರ  ಭಾನುವಾರ ಅದ್ಧೂರಿಯಾಗಿ  ಬಿಗ್ಬಾಸ್ ರಿಯಾಲಿಟಿ ಸೋ ಆರಂಭಗೊಂಡಿದೆ.  ಸ್ಪರ್ಧಿಗಳು ಬಿಗ್‍ಬಾಸ್ ಮನೆಯೊಳಗೆ ಬಲಗಾಲಿಡುವ ಮುನ್ನ  ಕಿಚ್ಚ ಸುದೀಪ್  ‘ಬಿಗ್ ಬಾಸ್’ ಮನೆಯ ಮೂಲೆ ಮೂಲೆಗಳನ್ನು ಪ್ರೇಕ್ಷಕರಿಗೆ ಪರಿಚಯ ಮಾಡಿಕೊಟ್ಟಿದ್ದರು.  ಈಗ ಪ್ರತಿಯೊಬ್ಬ ಸ್ಪರ್ಧಿಗಳು ತಮ್ಮ ಪರಿಚಯದ ಮೂಲಕ ಬಲಗಾಲಿಟ್ಟು ಬಿಗ್‍ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದಾರೆ.

2013ರಲ್ಲಿ  ಬಿಗ್‍ಬಾಸ್  ಆರಂಭವಾದ  ಬಿಗ್‍ಬಾಸ್  ಯಶಸ್ವಿಯಾಗಿ 4ನೇ ಸಂಚಿಕೆಗಳನ್ನು ಪೂರೈಸಿ ಸದ್ಯ 2017ರಲ್ಲಿ 17 ಸ್ಪರ್ಧಿಗಳಲ್ಲಿ  11 ಜನ ಸೆಲೆಬ್ರಿಟಿಗಳು ಮತ್ತು 6 ಜನ ಕಾಮನ್ ಮ್ಯಾನ್ಗಳು ಭಾಗವಯಿಸಲಿದದು 5 ನೇ ಸಂಚಿಕೆ ಹೊಸತನದೊಂದಿಗೆ ಪ್ರೇಕ್ಷಕರನ್ನು ರಂಜಿಸಲು ರೆಡಿಯಾಗಿದೆ.

ಬಿಗ್‍ಬಾಸ್ 5 ನೇ ಸಂಚಿಕೆ  17 ಸ್ಪರ್ಧಿಗಳ ಪಟ್ಟಿ

ಜ್ಯೋತಿಷಿ ಜಯಶ್ರೀನಿವಾಸನ್
ಜ್ಯೋತಿಷಿ ಜಯಶ್ರೀನಿವಾಸನ್

 

 

 

ಕನ್ನಡದ ಕಿರುತೆರೆಯ ಜನಪ್ರಿಯ ಸಂಖ್ಯಾಶಾಸ್ತ್ರದ  ಜ್ಯೋತಿಷಿ ಜಯಶ್ರೀನಿವಾಸನ್.ಬಿಗ್‍ಬಾಸ್ ಸಿಸನ್ 5ನ ಮೊದಲ ಸ್ಪರ್ಧಿ.

ಕೊಡಗಿನ ಕುವರಿ ಮೇಘ
ಮೇಘ

ಬಿಗ್ ಬಾಸ್ ಕನ್ನಡ-5ನ ಮೊದಲ ‘ಜನಸಾಮಾನ್ಯ ಸ್ಪರ್ಧಿ’ಯಾಗಿ  ಕೊಡಗಿನ ಶನಿವಾರಸಂತೆಯ  ಮೇಘ.

 

ದಯಾಳ್ ಪದ್ಮನಾಭನ್
ದಯಾಳ್ ಪದ್ಮನಾಭನ್

ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕ, ನಿರ್ದೇಶಕರಾಗಿರುವ ದಯಾಳ್ ಪದ್ಮನಾಭನ್ ‘ಬಿಗ್ ಬಾಸ್ ಕನ್ನಡ-5’ ಕಾರ್ಯಕ್ರಮದಲ್ಲಿ ಮೂರನೇ ಸ್ಪರ್ಧಿಯಾಗಿ ಕಾಲಿಟ್ಟಿದ್ದಾರೆ.

 

ಸಿಹಿ ಕಹಿ ಚಂದ್ರು
ಸಿಹಿ ಕಹಿ ಚಂದ್ರು

ಬೊಂಬಾಟ್ ಭೋಜನ ಮಾಡುವುದರಲ್ಲಿ ಪರ್ಫೆಕ್ಟ್ ಆಗಿರುವ ಸಿಹಿ ಕಹಿ ಚಂದ್ರು ‘ಬಿಗ್ ಬಾಸ್ ಕನ್ನಡ-5’ ಕಾರ್ಯಕ್ರಮದ ನಾಲ್ಕನೇ ಸ್ಪರ್ಧಿಯಾಗಿ ಎಂಟ್ರಿಕೊಟ್ಟಿದ್ದಾರೆ.

'ಅಕ್ಕ' ಅನುಪಮಾ ಗೌಡ
ಅನುಪಮಾ ಗೌಡ

ಕಿರುತರೆಯ ‘ಅಕ್ಕ’ ಧಾರಾವಾಹಿ ಖ್ಯಾತಿಯ ಅನುಪಮಾ ಗೌಡ ‘ಬಿಗ್ ಬಾಸ್ ಕನ್ನಡ-5’ ಕಾರ್ಯಕ್ರಮದ ಆರನೇ ಸ್ಪರ್ಧಿಯಾಗಿ ‘ಬಿಗ್ ಬಾಸ್’ ಮನೆಗೆ ಕಾಲಿಟ್ಟಿದ್ದಾರೆ.

ಶ್ರುತಿ ಪ್ರಕಾಶ್
ಶ್ರುತಿ ಪ್ರಕಾಶ್

ಬೆಳಗಾವಿಯಲ್ಲಿ ಹುಟ್ಟಿದ ಶ್ರುತಿ ಮುಂಬೈನಲ್ಲಿ ನೆಲೆರುವ ಗಾಯಕಿ ಹಾಗೂ ನಟಿ ಆಗಿರುವ ಶ್ರುತಿ ಪ್ರಕಾಶ್ ಕಂಡುಕೊಂಡಿದ್ದಾರೆ.

 

'ಕಾಮನ್ ಮ್ಯಾನ್' ರಿಯಾಝ್ ಬಾಷಾ
ರಿಯಾಝ್ ಬಾಷಾ

 

ಮುಂಬೈನಲ್ಲಿ ಕೆಲಸ ಮಾಡಿ ಇದೀಗ ಬೆಂಗಳೂರಿನಲ್ಲಿ ನೆಲೆಯೂರಿರುವ  ಮಧ್ಯಮ ವರ್ಗದ ಹುಡುಗ ರಿಯಾಝ್ ಬಾಷಾ .  ಕಾಮನ್ ಮ್ಯಾನ್ ಆಗಿ ‘ಬಿಗ್ ಬಾಸ್’ ಮನೆಗೆ ಎಂಟ್ರಿಕೊಟ್ಟಿದ್ದಾರೆ.

ಡಬ್ ಸ್ಮ್ಯಾಶ್ ರಾಜಕುಮಾರಿ ನಿವೇದಿತಾ
ನಿವೇದಿತಾ

ಮೈಸೂರಿನ ನಿವೇದಿತಾ ಗೌಡ ಬಿಗ್ ಬಾಸ್ ಕನ್ನಡದ ಐದು ಸಂಚಿಕೆಯಲ್ಲಿ  ಅತಿ ಕಿರಿಯ ಸ್ಪರ್ಧಿಯಾಗಿದ್ದಾರೆ.  ಕಾಮನ್ ಮ್ಯಾನ್ ಆಗಿ ‘ಬಿಗ್ ಬಾಸ್’ ಮನೆಗೆ ಪ್ರವೇಶಿಸಿದ್ದಾರೆ.
ಅರ್ಚಕ ಸಮೀರಾಚಾರ್ಯ
ಅರ್ಚಕ ಸಮೀರಾಚಾರ್ಯ
ಕಾಮನ್ ಮಾನ್ ಆಗಿ ಹುಬ್ಬಳ್ಳಿಯ ಪಂಡಿತ್ ಸಮೀರಾಚಾರ್ಯ   ‘ಬಿಗ್ ಬಾಸ್’ ಮನೆಗೆ ಒಂಬತ್ತನೇ ಸ್ಪರ್ಧಿಯಾಗಿ ಬಂದಿದ್ದಾರೆ ಹುಬ್ಬಳ್ಳಿಯ ಪಂಡಿತ್ ಸಮೀರಾಚಾರ್ಯ.

'ಸೂಪರ್ ಸ್ಟಾರ್' ಜೆ.ಕೆ
‘ಸೂಪರ್ ಸ್ಟಾರ್’ ಜೆ.ಕೆ
ಸಿಸಿಎಲ್ ಆಟಗಾರ, ಕಿರುತೆರೆಯ ‘ಸೂಪರ್ ಸ್ಟಾರ್’, ‘ಅಶ್ವಿನಿ ನಕ್ಷತ್ರ’ ಧಾರಾವಾಹಿ ಖ್ಯಾತಿಯ ಜೆ.ಕೆ ‘ಬಿಗ್ ಬಾಸ್’ ಕಾರ್ಯಕ್ರಮದ ಹತ್ತನೇ ಸ್ಪರ್ಧಿಯಾಗಿ ‘ದೊಡ್ಮನೆ’ಗೆ ಕಾಲಿಟ್ಟಿದ್ದಾರೆ.

ಆಶಿತಾ ಚಂದ್ರಪ್ಪ
ಆಶಿತಾ ಚಂದ್ರಪ್ಪ
‘ಜೊತೆ ಜೊತೆಯಲಿ’ ಹಾಗೂ ‘ನೀಲಿ’ ಧಾರಾವಾಹಿಗಳ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ನಟಿ ಆಶಿತಾ ಚಂದ್ರಪ್ಪ ‘ಬಿಗ್ ಬಾಸ್’ ಮನೆಗೆ ಹನ್ನೊಂದನೇ ಸ್ಪರ್ಧಿಯಾಗಿ ಎಂಟ್ರಿಕೊಟ್ಟಿದ್ದಾರೆ.

'ಸೇಲ್ಸ್ ಮ್ಯಾನ್' ದಿವಾಕರ್
ದಿವಾಕರ್
ನರಸೀಪುರದಲ್ಲಿ ಹುಟ್ಟಿ ಮಡಿಕೇರಿಯಲ್ಲಿ ಬೆಳೆದಿರುವ ದಿವಾಕರ್ ‘ಬಿಗ್ ಬಾಸ್’ ಕಾರ್ಯಕ್ರಮದ ಹನ್ನೆರಡನೇ ಸ್ಪರ್ಧಿ.
ನಟಿ ತೇಜಸ್ವಿನಿ
ನಟಿ ತೇಜಸ್ವಿನಿ

 

‘ಸವಿ ಸವಿ ನೆನಪು’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಹಾಗೂ ‘ನಿಹಾರಿಕ’ ಸೇರಿದಂತೆ ಕೆಲ ಧಾರಾವಾಹಿಗಳಲ್ಲಿ ಅಭಿನಯಿಸಿರುವ ತೇಜಸ್ವಿನಿ ಇದೀಗ ‘ಬಿಗ್ ಬಾಸ್’ ಕಾರ್ಯಕ್ರಮದ ಹದಿಮೂರನೇ ಸ್ಪರ್ಧಿ ಆಗಿದ್ದಾರೆ.

'ಮೂರು ಪೆಗ್' ಚಂದನ್ ಶೆಟ್ಟಿ
ಚಂದನ್ ಶೆಟ್ಟಿ

”ಮೂರೇ ಮೂರು ಪೆಗ್ ಗೆ…” ಹಾಡಿನ ಮೂಲಕ ಜನಪ್ರಿಯತೆ ಗಳಿಸಿರುವ ರ್ಯಾಪರ್ ಚಂದನ್ ಶೆಟ್ಟಿ ‘ಬಿಗ್ ಬಾಸ್ ಕನ್ನಡ-5’ ಕಾರ್ಯಕ್ರಮದ ಹದಿನಾಲ್ಕನೇ ಸ್ಪರ್ಧಿ.

ಗೃಹಿಣಿ 'ಮಹಾರಾಣಿ' ಸುಮಿತ್ರಾ ದೇವಿ
ಸುಮಿತ್ರಾ ದೇವಿ

ಮ್ಯಾಜಿಕ್ ಶೋ ಮಾಡುವ, ಮೈಸೂರಿನ ಸುಮಾ ರಾಜಕುಮಾರ್ ಅಲಿಯಾಸ್ ಮಹಾರಾಣಿ ಸುಮಿತ್ರಾ ದೇವಿ ‘ಬಿಗ್ ಬಾಸ್ ಕನ್ನಡ-5’ ಕಾರ್ಯಕ್ರಮದ ಹದಿನೈದನೇ ಸ್ಪರ್ಧಿ.

ಜಗನ್ನಾಥ್ ಚಂದ್ರಶೇಖರ್
ಜಗನ್ನಾಥ್ ಚಂದ್ರಶೇಖರ್

ಜನಪ್ರಿಯ ಧಾರಾವಾಹಿ ‘ಗಾಂಧಾರಿ’ ನಾಯಕ ಜಗನ್ನಾಥ್ ಚಂದ್ರಶೇಖರ್ ‘ಬಿಗ್ ಬಾಸ್ ಕನ್ನಡ-5’ ಕಾರ್ಯಕ್ರಮದ ಹದಿನಾರನೆಯ ಸ್ಪರ್ಧಿ.

ಕೃಷಿ ತಾಪಂಡ
ಕೃಷಿ ತಾಪಂಡ

( ವರದಿ: ಪಿ.ಎಸ್ )

Leave a Reply

comments

Related Articles

error: