ಮೈಸೂರು

ಕಂದಾಯ ವಸೂಲಾತಿ ಅಭಿಯಾನ

ಮೈಸೂರು ನಗರ ನೀರು ಸರಬರಾಜು ವ್ಯವಸ್ಥೆಯಡಿ ವಾಣಿ ವಿಲಾಸ ನೀರು ಸರಬರಾಜು ಕಾರ್ಯಾಲಯಕ್ಕೆ ಗ್ರಾಹಕರು ಕಂದಾಯ ಕಟ್ಟದೇ ಬಾಕಿ ಉಳಿಸಿಕೊಂಡಿದ್ದಾರೆ. ಒಟ್ಟು 125ಕೋಟಿ ರೂಪಾಯಿ ಬಾಕಿ ಉಳಿದಿದ್ದು, ನೀರಿನ ಕಂದಾಯ ಕಟ್ಟಿ ಕಂದಾಯ ಕಟ್ಟಿದವರಿಗೆ  ಬಡ್ಡಿ ಮನ್ನಾ ಮಾಡುತ್ತಿದ್ದೇವೆ ಎನ್ನುವ ಅಭಿಯಾನವನ್ನು ಸೋಮವಾರದಿಂದ ಪಾಲಿಕೆ ಕೈಗೊಂಡಿದ್ದು, ನಗರದ ಪ್ರತಿ ವಾರ್ಡ್ ಗಳಲ್ಲಿಯೂ ಕಂದಾಯ ವಸೂಲಾತಿ ಕಾರ್ಯಕ್ರಮ ನಡೆಯಲಿದೆ. ವಾರ್ಡ್ ನಂಬರ್ 2ರಲ್ಲಿ ಸೋಮವಾರ ಪಾವತಿ ಕೇಂದ್ರವನ್ನು ತೆರೆಯಲಾಗಿದೆ.

ಸೋಮವಾರ ಬೆಳಿಗ್ಗೆ ವಾರ್ಡ್ ನಂಬರ್ 2ಕ್ಕೆ ತೆರಳಿದ ಮೇಯರ್ ಬಿ.ಎಲ್.ಭೈರಪ್ಪ, ಮನಪಾ ಆಯುಕ್ತ  ಜಗದೀಶ್  ಕಂದಾಯ ವಸೂಲಾತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಸಂದರ್ಭ ಮಾತನಾಡಿದ ಅವರು ಮೈಸೂರು ನಗರಪಾಲಿಕೆಯ ನೀರಿನ ಕಂದಾಯ ಉಳಿಸಿಕೊಂಡಿರುವವರು ನೀರಿನ ಕಂದಾಯ ಕಟ್ಟಿ ಅವರಿಗೆ ಬಡ್ಡಿ ಮನ್ನಾ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಬಾಕಿ ನೀರಿನ ಕಂದಾಯವನ್ನು ವಸೂಲು ಮಾಡಲು ವಾಣಿವಿಲಾಸ ನೀರು ಸರಬರಾಜು ಕಾರ್ಯಾಲಯವು ಕಾರ್ಯೋನ್ಮುಖವಾಗಿದ್ದು, ಪ್ರತಿ ಬಾಕಿದಾರರ ಬಳಿ ವಸೂಲಿಗೆ ಬರುತ್ತಿದೆ. ಬಾಕಿದಾರರು ತಪ್ಪದೇ ಉಳಿಸಿಕೊಂಡಿರುವ ನೀರಿನ ಕಂದಾಯ ಪಾವತಿಸಿ ಎಂದು ಹೇಳಿದರು. ಪಾವತಿಸಲು ನಿರಾಕರಿಸುವ ಗ್ರಾಹಕರ ನೀರಿನ ಹಾಗೂ ಒಳಚರಂಡಿ ಸಂಪರ್ಕಗಳನ್ನು ಕಡಿತಗೊಳಿಸಿ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಸಂದರ್ಭ ವಾರ್ಡ್ ನಂಬರ್ 2  ಕಾರ್ಪೋರೇಟರ್ ಶಿವಕುಮಾರ್ ಜೊತೆಯಲ್ಲಿದ್ದರು.

ನಗರ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅನಧಿಕೃತ ಸಂಪರ್ಕಗಳಿದ್ದು ಇದರಿಂದ ನೀರಿನ ತೆರಿಗೆ ವಸೂಲಾಗದೆ ಪಾಲಿಕೆಗೆ ನಷ್ಟವಾಗುತ್ತಿದೆ. ಹೆಚ್ಚಿನ ನೀರು ಪೋಲಾಗುತ್ತಿದೆ. ಆದ್ದರಿಂದ ಅನಧಿಕೃತ ನಲ್ಲಿ ಸಂಪರ್ಕಗಳನ್ನು  ಅಧಿಕೃತಗೊಳಿಸಿಕೊಳ್ಳಲು ಸೂಚಿಸಿದೆ. ತಪ್ಪಿದಲ್ಲಿ ಅಂತಹ ಸಂಪರ್ಕಗಳನ್ನು ದಂಡ ಸಮೇತ ಕಡಿತ ಮಾಡಲಾಗುವುದು ಎಂದು ಮೈಸೂರು ಮಹಾನಗರ ಪಾಲಿಕೆ ತಿಳಿಸಿದೆ.

Leave a Reply

comments

Related Articles

error: