ಮೈಸೂರು

ಮೈಸೂರು ಪಾಲಿಕೆಯಿಂದ ಡೇ-ನಲ್ಮ್ ಯೋಜನೆಯಡಿ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಮೈಸೂರು (ಅ.10): ಮೈಸೂರು ಮಹಾನಗರ ಪಾಲಿಕೆಯು 2017-18ನೇ ಸಾಲಿಗಾಗಿ ಡೇ-ನಲ್ಮ್ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಸಾಮಾಜಿಕ ಕ್ರೋಢೀಕರಣ ಮತ್ತು ಸಾಂಸ್ಥಿಕ ಅಬಿವೃದ್ಧಿ, ಸ್ವಯಂ ಉದ್ಯೋಗ ಕಾರ್ಯಕ್ರಮ, ಕೌಶ್ಯಲ ತರಬೇತಿ ಮೂಲಕ ಉದ್ಯೋಗ ಮತ್ತು ಸ್ಥಳ ನಿಯುಕ್ತಿ, ನಗರ ವಸತಿ ರಹಿತರಿಗೆ ಆಶ್ರಯ, ಮತ್ತು ನಗರದ ಬೀದಿ ವ್ಯಾಪರಸ್ಥರಿಗೆ ಬೆಂಬಲ ಉಪಘಟಕಗಳ ಮೂಲಕ ನಗರ ಬಡ ಜನರಿಗೆ ಸೌಲಭ್ಯಗಳನ್ನು ಕಲ್ಪಿಸಲು ಅರ್ಜಿ ಆಹ್ವಾನಿಸಿದೆ.

ಅರ್ಜಿ ಸಲ್ಲಿಸಲು ಅರ್ಹ ಬಡ ಜನರು ಮೈಸೂರು ಮಹಾನಗರ ಪಾಲಿಕೆಯ 1 ರಿಂದ 9ರ ವರೆಗಿನ ವಲಯ ಕಚೇರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.
(ಎನ್‍ಬಿಎನ್)

Leave a Reply

comments

Related Articles

error: