ಮೈಸೂರು

ಬೋನಿನಲ್ಲಿ ಸೆರೆಯಾದ ಮತ್ತೊಂದು ಚಿರತೆ

ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿ ಕೆಲ ದಿನಗಳಿಂದ ಚಿರತೆಗಳ ಹಾವಳಿ ಹೆಚ್ಚುತ್ತಿದ್ದು, ಚಿರತೆಯ ಸೆರೆಗೆ ಕಬಿನಿ ಜಲಾಶಯದ ಬಳಿ ಬೋನನ್ನು ಇರಿಸಲಾಗಿತ್ತು.. ಇದೀಗ  ಬೋನಿಗೆ ಎರಡು ವರ್ಷದ ಹೆಣ್ಣು ಚಿರತೆಯೊಂದು ಬಿದ್ದಿದ್ದು, ವಾರದೊಳಗೆ ಎರಡು ಚಿರತೆ ಸೆರೆಯಾದಂತಾಗಿದೆ.

ಕಳೆದ ಹಲವಾರು ದಿನಗಳಿಂದ ಬೀಚನಹಳ್ಳಿ ಸೇರಿದಂತೆ ಸುತ್ತಮುತ್ತಲ ಭಾಗದ ಗ್ರಾಮಗಳ ಜನರಿಗೆ ಹಾಗೂ ಅಲ್ಲಿನ ರೈತರಿಗೆ ಸೇರಿದ ಜಾನುವಾರಗಳ ಮೇಲೆ ಚಿರತೆ ದಾಳಿ ನಡೆಸುತ್ತಿತ್ತು. ಚಿರತೆಯ ಹಾವಳಿಯಿಂದ ಕಂಗೆಟ್ಟ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗೆ ದೂರು ನೀಡಿದ್ದರು. ಗ್ರಾಮಸ್ಥರ ದೂರಿನ ಮೇರೆಗೆ ಅರಣ್ಯ ಇಲಾಖೆಯು ಚಿರತೆಯ ಸೆರೆಗೆ ಬೋನನ್ನು ಇರಿಸಿತ್ತು. ಭಾನುವಾರ ತಡರಾತ್ರಿ ಎರಡು ವರ್ಷದ ಹೆಣ್ಣು ಚಿರತೆ ಬೋನಿನಲ್ಲಿ ಸೆರೆಯಾಗಿದೆ. ಬೋನಿಗೆ ಸೆರೆ ಸಿಕ್ಕ ಚಿರತೆಯನ್ನು ನಾಗರ ಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ರವಾನಿಸಲಾಗಿದೆ.

ಕಳೆದ ಮೂರು ದಿನಗಳ ಹಿಂದೆ ಇದೇ ಜಾಗದಲ್ಲಿ ಇರಿಸಿದ್ದ ಬೋನಿಗೆ ಎರಡು ವರ್ಷದ ಗಂಡು ಚಿರತೆ ಸೆರೆಯಾಗಿತ್ತು. ಇದೀಗ ಈ ಪ್ರದೇಶದಲ್ಲಿ  ಚಿರತೆಯ ಕಾಟ ಹೆಚ್ಚಾಗಿದ್ದು ಅರಣ್ಯ ಇಲಾಖೆ ತೀವ್ರ ನಿಗಾ ವಹಿಸಿದೆ.

Leave a Reply

comments

Related Articles

error: