ಮೈಸೂರು

ಸಿ.ಇ.ಟಿ ಮಾದರಿ ಪರೀಕ್ಷೆ ನಡೆಸಿ ಕೆ.ಎಸ್.ಓ. ಯು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿ : ಮನವಿ

ಮೈಸೂರು, ಅ.16 : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿಗಳಿಗೆ ಸಿ.ಇ.ಟಿ ಮಾದರಿಯಲ್ಲಿ ಪರೀಕ್ಷೆ ನಡೆಸಿ ಅರ್ಹರಿಗೆ ಪದವಿ ಪಡೆಯಲು ಅವಕಾಶ ನೀಡಬೇಕೆಂದು ವಿಶ್ವಮಾನವ ಮೈಸೂರು ವಿಶ್ವವಿದ್ಯಾನಿಲಯ ನೌಕರರ ವೇದಿಕೆಯು ಒತ್ತಾಯಿಸಿದೆ.

ಯುಜಿಸಿ ಮಾನ್ಯತೆ ನೀಡುವುದು ಕೇಂದ್ರ ಸರ್ಕಾರದ ಹೊಣೆಯಾಗಿದ್ದು, ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸಬಾರದು, ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವನ್ನು ಪುನಾರಂಭಕ್ಕೆ ವಿಳಂಬಕ್ಕೆ ಕೇಂದ್ರ ಸರ್ಕಾರ ನೇರ ಹೊಣೆಯಾಗಲಿದ್ದು ಶೀಘ್ರವೇ ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು. ಸರ್ಕಾರ ವಿವಿಯನ್ನು ರಕ್ಷಣೆಗೆ ಸಕಲ ಪ್ರಯತ್ನ ನಡೆಸಿದೆ, ಕೇಂದ್ರದ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಅವರು ವಿವಿಯನ್ನು ಮುಚ್ಚುವುದಿಲ್ಲವೆಂದು ಆಶ್ವಾಸನೆ ನೀಡಿರುವುದು ಸಮಧಾನ ತಂದಿದೆ, ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ರಾಜ್ಯದ ಜನಪ್ರತಿನಿಧಿಗಳು ಪಕ್ಷ ಬೇಧ ಮರೆತು ವಿದ್ಯಾರ್ಥಿಗಳ ಪರವಾಗಿ ನಿಂತು ಬೆಂಬಲಿಸಿ ನ್ಯಾಯ ಒದಗಿಸಬೇಕು, ಅಲ್ಲದೇ  ಶೀಘ್ರದಲ್ಲಿಯೇ ವಿವಿಗೆ ಯುಜಿಸಿ ಮಾನ್ಯತೆ ನೀಡಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ವೇದಿಕೆಯ ಗೌರವಾಧ್ಯಕ್ಷ ಹರೀಶ್ ಗೌಡ, ಅಧ್ಯಕ್ಷ ಆರ್.ವಾಸುದೇವ, ಪದಾಧಿಕಾರಿಗಳಾದ ಭಾಸ್ಕರ್, ವಿನೋದ್, ಮಂಜೇಶ್ ಮೊದಲಾದವರು ಮನವಿ ಮಾಡಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: