ಮೈಸೂರು

ಪೇಂಟ್ & ವಾರ್ನಿಶ್ : ಎಚ್. ವೆಂಕಟೇಶ್ ಅಧಿಕಾರ ಸ್ವೀಕಾರ

ಮೈಸೂರಿನ ತಿಲಕನಗರದಲ್ಲಿರುವ ಪೇಂಟ್ & ವಾರ್ನಿಶ್ ಕಛೇರಿಯ ನೂತನ ಅಧ್ಯಕ್ಷರಾಗಿ ಎಚ್.ವೆಂಕಟೇಶ್ ಸೋಮವಾರ ಅಧಿಕಾರ ಸ್ವೀಕರಿಸಿದರು.

ತಿಲಕನಗರದ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ  ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಹೆಚ್. ವೆಂಕಟೇಶ್ ಅವರನ್ನು ಹೂಗುಚ್ಛ ನೀಡಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನನಗೆ  ಜವಾಬ್ದಾರಿಯುತ ಕೆಲಸವನ್ನು ನೀಡಿದ್ದಾರೆ. ಅದನ್ನು ಸಮರ್ಥವಾಗಿ ಉಳಿಸಿಕೊಂಡು ಹೋಗುವ ಮೂಲಕ ಸಂಸ್ಥೆಯ ಹೆಸರನ್ನೂ ಉಳಿಸುತ್ತೇನೆ ಎಂದರು.

ಈ ಸಂದರ್ಭ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಸಿದ್ಧರಾಜು, ನಗರ ಕಾಂಗ್ರೆಸ್ ಅಧ್ಯಕ್ಷ ರವಿಶಂಕರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: