ಮೈಸೂರು

ಮೈಸೂರು ಶಾಂತಿಗೆ ಹೆಸರಾಗಿದೆ : ಚಿತ್ರನಟ ಸುದೀಪ್

ಮೈಸೂರು ಶಾಂತಿ ಮತ್ತು ನೆಮ್ಮದಿಗೆ ಹೆಸರಾಗಿದ್ದು ಅದಕ್ಕಾಗಿ ನಾನು ಮೈಸೂರಿಗೆ ಬರಲು ಇಷ್ಟಪಡುತ್ತೇನೆ ಎಂದು ಖ್ಯಾತ ಚಲನಚಿತ್ರ ನಟ ಸುದೀಪ್ ಹೇಳಿದರು.

ಮೈಸೂರಿನ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಏರ್ಪಡಿಸಲಾದ ಶಾಪಿಂಗ್ ಫೆಸ್ಟಿವಲ್ ನ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ಸುದೀಪ್ ಮಾತನಾಡಿದರು. ಇತ್ತೀಚಿಗೆ ನಾನು ಹೆಬ್ಬುಲಿ ಚಿತ್ರದ ಚಿತ್ರೀಕರಣ ಸಂದರ್ಭ ಮೈಸೂರಿಗೆ ಆಗಮಿಸಿದ್ದೆ. ಈಗ ಮತ್ತೊಮ್ಮೆ ಬರುವಂತಾಗಿದ್ದು ಖುಷಿ ನೀಡಿದೆ ಎಂದರು. ಮೈಸೂರಿನ ಹಿರಿಮೆಯನ್ನು ಕಾಪಾಡಿ ಎಂದರಲ್ಲದೇ ಮೈಸೂರನ್ನು ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ ಎಂದು ತಿಳಿಸಿದರು.

ಬಳಿಕ ಜಸ್ಟ್ ಮಾತ್ ಮಾತಲ್ಲಿ ಚಿತ್ರದ ಮುಂಜಾನೆ ಮಂಜಿನಲಿ ಹಾಡನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ಶಾಪಿಂಗ್ ಫೆಸ್ಟಿವಲ್ ರಾಯಭಾರಿಯಾಗಿದ್ದ ಸುದೀಪ್ ಅವರನ್ನು ಮೈಸೂರು ಪೇಟ ತೊಡಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚನ್ನಣ್ಣನವರ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್, ಮಾಜಿ ಸಚಿವ ಎಸ್.ಎ.ರಾಮದಾಸ್ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಚಲನಚಿತ್ರ ಹಿನ್ನೆಲೆ ಗಾಯಕ ಕುನಾಲ್ ಗಾಂಜಾವಾಲ್ ಅವರ ಗಾಯನಕ್ಕೆ ಪ್ರೇಕ್ಷಕರು ತಲೆದೂಗಿದರು.

Leave a Reply

comments

Related Articles

error: