ಮೈಸೂರು

ಶಬ್ದ ಮಾಲಿನ್ಯದ ಪಟಾಕಿಯನ್ನು ತ್ಯಜಿಸಿ ದೀಪ ಹಚ್ಚಿ ದೀಪಾವಳಿ ಆಚರಿಸಿ : ಬನ್ನೂರು ಕೆ.ರಾಜು

ಮೈಸೂರು,ಅ.16:- ನಗರದ ಅರಿವು ಸಂಸ್ಥೆಯ ವತಿಯಿಂದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ರವರ 86 ನೇ ಜನ್ಮ ದಿನ ಹಾಗೂ ಪಟಾಕಿ ಯ ಬಗ್ಗೆ ಅರಿವು ಮೂಡಿಸುವ  ನಿಟ್ಟಿನಲ್ಲಿ ನಗರದ ಅಕ್ಕ ನ ಬಳಗ ಶಾಲೆ ಯ ಮಕ್ಕಳಿಗೆ  ಕಲಾಂ ಜೀ ರವರ ಭಾವಚಿತ್ರ ಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಯಿತು.

ಪುಷ್ಪಾರ್ಚನೆ ಮಾಡಿದ ಹಿರಿಯ ಸಾಹಿತಿಗಳಾದ ಬನ್ನೂರು ಕೆ.ರಾಜು ಮಾತನಾಡಿ ಅವರು ಈ ದೇಶದ ಅತ್ಯುತ್ತಮ ರಾಷ್ಟ್ರಪತಿಗಳು. ಈ ದೇಶದ 11 ನೇ ರಾಷ್ಟ್ರಪತಿ ಆಗಿದ್ದರು. ಕ್ಷಿಪಣಿ ಹಾರಿಸುವ ಮುಖೇನಾ ಕ್ಷಿಪಣಿ ಮಾನವ ಎಂದು ಕರಯುತ್ತಿದ್ದರು, ಕಲಾಂ ರವರು   ತುಂಬಾ ಬಡತನ ದಿಂದ ಬಂದಂತಹವರು ಅವರು ಮಕ್ಕಳ ಮತ್ತು ಯುವ ಜನ ಪ್ರಿಯರು,ಅವರು ವಿಜ್ಞಾನ ದ ಬಗ್ಗೆ ದೇಶದ ಉದ್ದಗಲಕ್ಕೂ ಉಪನ್ಯಾಸ ಮಾಡುತ್ತಿದ್ದರು, ಈ ದಿನ ಅವರ ಜಯಂತಿ ಯಾಗಿದ್ದು, ನೆನಪಿನಾರ್ಥವಾಗಿ ಹೆಚ್ಚು ಶಬ್ದ ಮಾಲಿನ್ಯದ ಪಟಾಕಿಯನ್ನು  ತ್ಯಜಿಸಿ ದೀಪ ಹಚ್ಚಿ ಮತ್ತು ವಾಯು ಮಾಲಿನ್ಯ, ಮತ್ತು ಶಬ್ದ ಮಾಲಿನ್ಯವನ್ನು ತಡೆಯಿರಿ ಎಂದು ತಿಳಿಸಿದರು. ನಂತರ ನಗರಪಾಲಿಕೆ ಸದಸ್ಯರಾದ ಮಾ.ವಿ.ರಾಮ ಪ್ರಸಾದ್ ಮಾತನಾಡಿ ಮಕ್ಕಳು ಕಲಾಂ ಜೀ ರವರ ಜೀವನ ಚರಿತ್ರೆಯನ್ನು ಆದರ್ಶವಾಗಿ ರೂಢಿಸಿಕೊಳ್ಳಬೇಕು, ಇಂತಹವರ ನೆನಪು ಮಾಡಿಕೊಳುವುದು ನಮ್ಮ ಧರ್ಮ ಮುಂಬರುವ ದೀಪಾವಳಿಯನ್ನು ಮಕ್ಕಳು ಎಚ್ಚರಿಕೆಯಿಂದ ಆಚರಣೆ ಮಾಡಬೇಕು ಅತಿ ಹೆಚ್ಚು ಶಬ್ದ ಬರುವ ಪಟಾಕಿ ಮತ್ತು ಹೆಚ್ಚು ವಾಯುಮಾಲಿನ್ಯದ ಪಟಾಕಿಯನ್ನು ತ್ಯಜಿಸಬೇಕು,ತಂದೆ ತಾಯಂದಿರು ಮಕ್ಕಳು ಪಟಾಕಿ ಹೊಡೆಯುವಾಗ ಅವರ ಬಗ್ಗೆ ಹೆಚ್ಚು ಗಮನಹರಿಸಬೇಕು,ಎಲ್ಲಾ ಮನೆಗಳಲ್ಲಿ ಹಣತೆ ಹಚ್ಚಿ ದೀಪಾವಳಿಯನ್ನು ಆಚರಣೆ ಮಾಡಬೇಕೆಂದು ಹೇಳಿದರು..

ಈ ಸಂದರ್ಭದಲ್ಲಿ ಯುವ ಭಾರತ್ ಸಂಘಟನೆಯ ಸದಸ್ಯ ಜೋಗಿ ಮಂಜು, ಕೆ.ಎಂ.ಪಿ.ಕೆ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ವಿಕ್ರಮ್ ಅಯ್ಯಂಗಾರ್, ಅರಿವು ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ್ ಕಶ್ಯಪ್, ರವಿತೇಜ,ಅಕ್ಕನ ಬಳಗದ ಶಾಲೆಯ ಪ್ರಾಧ್ಯಾಪಕರಾದ ಸುಗುಣಾವತಿ ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: