ಮೈಸೂರು

ಶಿಶುವಿನ ಮೃತ ದೇಹ ಪತ್ತೆ

ಮೈಸೂರಿನ ಗಾಯತ್ರಿಪುರಂನ ಒಂದನೇ ಹಂತದಲ್ಲಿರುವ ಚರಂಡಿ ಬಳಿ ಒಂದು ದಿನದ ಶಿಶುವಿನ ಮೃತ ದೇಹ ಪತ್ತೆಯಾಗಿದೆ. ಭಾನುವಾರ ರಾತ್ರಿಯೇ ಯಾರೋ ಇಲ್ಲಿ ತಂದು ಹಾಕಿರಬೇಕೆಂದು ಶಂಕಿಸಲಾಗಿದೆ.

ಸೋಮವಾರ ಬೆಳಿಗ್ಗೆ ಪೌರಕಾರ್ಮಿಕರು ಸ್ವಚ್ಛತೆಗೆ ಬಂದಾಗ ಶಿಶುವಿನ ಮೃತದೇಹ ಕಾಣಿಸಿದ್ದು, ನಜರಾಬಾದ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಶಿಶುವಿನ ಮೃತದೇಹವನ್ನು ಕೆ.ಆರ್.ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.

Leave a Reply

comments

Related Articles

error: