ಮೈಸೂರು

ನಂದಿ ವಿಗ್ರಹಕ್ಕೆ ಮಹಾಭಿಷೇಕ

ಬೆಟ್ಟದ ಬಳಗದ ವತಿಯಿಂದ ಚಾಮುಂಡಿ ಬೆಟ್ಟದಲ್ಲಿರುವ ಹದಿನೇಳು ಅಡಿ ಎತ್ತರದ ನಂದಿ ವಿಗ್ರಹಕ್ಕೆ ಸೋಮವಾರ ಮಹಾಅಭಿಷೇಕವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ತೀಕ ಮಾಸದ ಎರಡನೇ ಸೋಮವಾರ  ಮಹಾ ಅಭಿಷೇಕವನ್ನು ನಡೆಸಲಾಗುತ್ತಿದ್ದು, ಹಾಲು, ಮೊಸರು, ಜೇನುತುಪ್ಪ, ಸಕ್ಕರೆ, ಅರಿಶಿನ, ಕುಂಕುಮ, ಗಂಧ, ಚಂದನ, ಫಲ-ಪುಷ್ಪಗಳಿಂದ  ನಂದಿಗೆ ಅಭಿಷೇಕ ನೆರವೇರಿಸಲಾಯಿತು.

ಈ ಸಂದರ್ಭ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. ಓಂಪ್ರಕಾಶ್, ರವಿ, ರಾಜು, ಗೌರಿಶಂಕರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: