ದೇಶಪ್ರಮುಖ ಸುದ್ದಿ

ನ್ಯಾಯಾಲಯದ ಆದೇಶ: ಸುನಂದಾ ಪುಷ್ಕರ್ ಸಾವನ್ನಪ್ಪಿದ್ದ ಹೋಟೆಲ್ ಕೋಣೆ ಬೀಗ ತೆರವು

ನವದೆಹಲಿ,ಅ.17-ಕಾಂಗ್ರೆಸ್ ಮುಖಂಡ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ಸಾವನ್ನಪ್ಪಿದ್ದ ಪಂಚತಾರಾ ಲೀಲಾ ಪ್ಯಾಲೆಸ್ ಹೋಟೆಲ್ ಕೋಣೆಯನ್ನು ದೆಹಲಿಯ ನ್ಯಾಯಾಲಯ ಬೀಗ ಮುದ್ರೆಯಿಂದ ತೆರವುಗೊಳಿಸಿದೆ.

ಸುನಂದಾ ಪುಷ್ಕರ್ ಸಾವನ್ನಪ್ಪಿದ್ದ ದಿನದಿಂದ ತನಿಖೆಗಾಗಿ ಹೋಟೆಲ್ ಕೋಣೆ ಪೊಲೀಸರ ವಶದಲ್ಲಿತ್ತು. ಆದರೆ, ಅನೇಕ ದಿನಗಳಿಂದ ರೂಮ್ ಬೀಗ ಹಾಕಿದ್ದು, ಇದರಿಂದ ರೂಮ್ ಧೂಳು ಹಿಡಿದು ಹಾಳಾಗಿತ್ತು. ಹೀಗಾಗಿ ರೂಮ್ ತೆರೆಯಬೇಕೆಂದು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಗೆ ಹೋಟೆಲ್ ನ ಆಡಳಿತ ಮಂಡಳಿಯವರು ಮೊರೆ ಹೋಗಿದ್ದರು.

 

ಇದರಂತೆ ಅರ್ಜಿಯನ್ನು ವಿಚಾರಣೆ ನಡೆಸಿದ್ದ ನ್ಯಾಯಾಲಯ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯನ್ನು ಸಲ್ಲಿಸಿದ ಹಿನ್ನಲೆಯಲ್ಲಿ ಹೋಟೆಲ್’ನ ಕೋಣೆ ಬೀಗ ಮುದ್ರೆ ಹಾಕಿದ್ದನ್ನು 6 ದಿನಗಳ ಒಳಗಾಗಿ ತೆಗೆಯುವಂತೆ ಪೊಲೀಸರಿಗೆ ಅ.10 ರಂದು ಸೂಚಿಸಿತ್ತು. ನ್ಯಾಯಾಲಯದ ಆದೇಶದಂತೆಯೇ ಪೊಲೀಸರು ಹೋಟೆಲ್ ರೂಮ್ ಬೀಗವನ್ನು ತೆರೆದಿರುವುದಾಗಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ಸುನಂದಾ ಪುಷ್ಕರ್ 2014 ರ ಜ.17 ರಂದು ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಪಂಚತಾರಾ ಲೀಲಾ ಪ್ಯಾಲೆಸ್ ಹೋಟೆಲ್ ನಲ್ಲಿ ಸಾವನ್ನಪ್ಪಿದ್ದರು. (ವರದಿ-ಎಂ.ಎನ್)

 

Leave a Reply

comments

Related Articles

error: