ಮನರಂಜನೆಲೈಫ್ & ಸ್ಟೈಲ್

ಮೋಸ್ಟ್ ಹಾಟೆಸ್ಟ್ ಲಿಸ್ಟ್ ನಲ್ಲಿ ದೀಪಿಕಾ, ರಣ್‍ ಬೀರ್

ಮುಂಬೈ,ಅ.17: ಬಾಲಿವುಡ್ ಮೋಸ್ಟ್ ಸೆಕ್ಸಿಯಸ್ಟ್ ಮೆನ್ ಮತ್ತು ವುಮೆನ್ ಪಟ್ಟಿ ಬಿಡುಗಡೆಯಾಗಿದ್ದು, ಪಟ್ಟಿಯಲ್ಲಿ ದೀಪಿಕಾ ಪಡುಕೋಣೆ ಮತ್ತು ರಣ್‍ ಬೀರ್ ಕಪೂರ್ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

 ಹಿಂದೂಸ್ತಾನ್ ಟೈಮ್ಸ್ ಈ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಯಾರಿಗೆ ಎಷ್ಟು ವೋಟ್ ಬಿದ್ದಿದ್ದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

2017ರಲ್ಲಿ ಸಲ್ಮಾನ್ ಖಾನ್ 18.3% ವೋಟ್ ಗಳಿಸುವ ಮೂಲಕ ಮೊದಲ ಸ್ಥಾನ ಪಡೆದಿದ್ದಾರೆ. ಶಾರೂಖ್ ಖಾನ್ ಮತ್ತು ಅಕ್ಷಯ್ ಕುಮಾರ್ ಇಬ್ಬರೂ ನಟರು ಕ್ರಮವಾಗಿ 15.3% ಮತ್ತು 13.3% ವೋಟ್ ಗಳಿಸಿದ್ದಾರೆ. ಆದರೆ ಕಳೆದ ವರ್ಷ ಸಲ್ಮಾನ್ ಹಾಗೂ ಬಿಗ್-ಬಿ ಎರಡನೇ ಸ್ಥಾನವನ್ನು ಪಡೆದ್ದಾಗ ಶಾರೂಖ್ 21.4% ವೋಟ್ ಮೊದಲ ಸ್ಥಾನ ಪಡೆದಿದ್ದರು.

 

ಈ ಹಿಂದಿನಂತೆ ದೀಪಿಕಾ ಪಡುಕೋಣೆ ಈ ವರ್ಷವೂ ಪ್ರಿಯಾಂಕಾ, ಕತ್ರಿನಾ ಮತ್ತು ಆಲಿಯಾ ರನ್ನು ಹಿಂದಿಕ್ಕಿ 2017ರ ಸೆಕ್ಸಿಯೆಸ್ಟ್ ವುಮೆನ್ ಎಂಬ ಖ್ಯಾತಿ ಪಡೆದಿದ್ದಾರೆ. ದೀಪಿಕಾ ಈ ಬಾರಿ 33% ವೋಟ್ ಪಡೆದುಕೊಂಡರೆ, ಪ್ರಿಯಾಂಕಾ 22% ವೋಟ್ ಪಡೆದುಕೊಂಡು ಕತ್ರಿನಾ ಅವರನ್ನು ಹಿಂದಿಕ್ಕಿದ್ದಾರೆ. ಕಳೆದ ವರ್ಷಗಿಂತ ಕತ್ರಿನಾ 28% ವೋಟ್ ಪಡೆದು ಎರಡನೇ ಸ್ಥಾನ ಪಡೆದುಕೊಂಡಿದ್ದರು.

 

ಹಾಲಿವುಡ್ ಚಿತ್ರಗಳಿಂದ ದೀಪಿಕಾ ಸತತ 5 ಬಾರಿ ಸೆಕ್ಸಿಯೆಸ್ಟ್ ವುಮೆನ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ. ಆದರೆ ಕತ್ರಿನಾ ಕೇವಲ 2 ಬಾರಿ ಈ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ. ಪ್ರಿಯಾಂಕಾ ಚೋಪ್ರಾ 22.9% ವೋಟ್ ಪಡೆದು ಎರಡನೇ ಸ್ಥಾನ ಪಡೆದುಕೊಂಡರೆ, 22.1% ವೋಟ್ ಪಡೆದು ಆಲಿಯಾ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

 

Hey… @marieclairemag

A post shared by Priyanka Chopra (@priyankachopra) on

ಸೆಕ್ಸಿಯೆಸ್ಟ್ ಮೆನ್: ಕಳೆದ ವರ್ಷವೂ ಪ್ರಥಮ ಸ್ಥಾನ ಪಡೆದಿದ್ದ ರಣ್‍ಬೀರ್ ಕಪೂರ್ ಈ ಬಾರಿಯೂ 32.7% ವೋಟ್ ಪಡೆಯುವ ಮೂಲಕ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ರಣ್‍ ವೀರ್ ಸಿಂಗ್ 21.6% ವೋಟ್ ಪಡೆಯುವ ಮೂಲಕ ಕಳೆದ ವರ್ಷದಂತೆ ಈ ಬಾರಿಯೂ ಎರಡನೇ ಸ್ಥಾನ ಪಡೆದಿದ್ದಾರೆ. 2016ರಲ್ಲಿ ರಣ್‍ ಬೀರ್ 31.4% ವೋಟ್ ಪಡೆದಿದ್ದರೆ ರಣ್‍ ವೀರ್ ಸಿಂಗ್ 14.1% ವೋಟ್ ಪಡೆಯುವ ಮೂಲಕ ಎರಡನೇ ಸ್ಥಾನ ಸಿಕ್ಕಿತ್ತು.

ಟಾಲಿವುಡ್, ಬಾಹುಬಲಿ ನಾಯಕ ಪ್ರಭಾಸ್ ಬಾಲಿವುಡ್ ನಟರಿಗೆ ಈ ಸ್ಪರ್ಧೆಯಲ್ಲಿ ಫೈಟ್ ನೀಡಿದ್ದಾರೆ ಎಂದು ವರದಿ ತಿಳಿಸಿದೆ. ( ವರದಿ: ಪಿ.ಎಸ್ )

 

sexy! 😍

A post shared by ranbir kapoor (@ranbir_kapoor_official) on

Stand tall #mondaymotivation

A post shared by Ranveer Singh (@ranveersingh) on

 

Leave a Reply

comments

Related Articles

error: