ಮೈಸೂರು

ಶ್ರೀಮುತ್ತುಮಾರಿಯಮ್ಮ – ಪ್ಲೇಗಾಂಬ ದೇವಸ್ಥಾನದ 6ನೇ ವಾರ್ಷಿಕೋತ್ಸವ: ನ. 8 ರಿಂದ 10 ರ ವರೆಗೆ

ಮೈಸೂರಿನ ಜ್ಯೋತಿನಗರದಲ್ಲಿರುವ ಶ್ರೀಮುತ್ತುಮಾರಿಯಮ್ಮ ಹಾಗೂ ಪ್ಲೇಗಾಂಬ ಅಮ್ಮನವರ ದೇವಸ್ಥಾನದ ಆರನೇ ವಾರ್ಷಿಕೋತ್ಸವ ಹಾಗೂ ಕುಂಭಾಭಿಷೇಕವನ್ನು ನ. 8 ರಿಂದ ನ.10 ರ ವರೆಗೆ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಜಿ.ಎಸ್. ಸತ್ಯರಾಜು ತಿಳಿಸಿದರು.

ಅವರು, ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನ.8 ರ ಮಂಗಳವಾರ ಬೆಳಿಗ್ಗೆ 9 ಗಂಟೆಗೆ ಸುಮಂಗಲಿ ಪೂಜೆ ನೆರವೇರಿಸಲಿದ್ದು, ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ ಚೆನ್ನಣ್ಣನವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಮಿತ್ರ ನವೀನ್ ಅವರಿಂದ ಭರತನಾಟ್ಯ ಕಾರ್ಯಕ್ರಮ ಜರುಗುವುದು.

ಮೈಸೂರನ್ನು ಸ್ವಚ್ಛ ನಗರವನ್ನಾಗಿಸಲು ಶ್ರಮಿಸುತ್ತಿರುವ ಪೌರ ಕಾರ್ಮಿಕರಿಗೆ ಹಾಗೂ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ನ.9 ರಂದು ಸಂಜೆ 6:30 ಕ್ಕೆ  ಸನ್ಮಾನಿಸಲಾಗುವುದು. ಸಮಾರಂಭದ ಮುಖ್ಯ ಅತಿಥಿಯಾಗಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಭಾಗವಹಿಸುವರು. ನ.10 ರಂದು ಬೆಳಿಗ್ಗೆ 8 ಗಂಟೆಗೆ ನವಗ್ರಹ ಮತ್ತು ಕಲಾವೃದ್ಧಿ ಗಣಪತಿ ಪೂಜಾ ಹೋಮ, 11 ಗಂಟೆಗೆ ಪೂರ್ಣಾಹುತಿ, ಕುಂಭಾಭಿಷೇಕ ಹಾಗೂ ಅನ್ನಸಂತರ್ಪಣೆ ನಡೆಯುವುದು. ಅಂದು ಸಂಜೆ 6:30 ಕ್ಕೆ ಮೈಸೂರಿನ ಡ್ರಾಮ ಜ್ಯೂನಿಯರ್ಸ್ ಖ್ಯಾತಿಯ ಮಾ. ಮಹೇಂದ್ರ ಪ್ರಸಾದ್ ಹಾಗೂ ಅಚಿಂತ್ಯಾ ಪುರಾಣಿಕ್ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷ ದೇವರಾಜ್, ಕಾರ್ಯದರ್ಶಿ ರಾಮಚಂದ್ರ, ಖಜಾಂಚಿ ವಿ. ಶೇಖರ್, ಸಂಘಟನಾ ಕಾರ್ಯದರ್ಶಿಗಳಾದ ಸತೀಶ್ ಮತ್ತು ಸಂದೀಪ್ ಉಪಸ್ಥಿತರಿದ್ದರು.

Leave a Reply

comments

Related Articles

error: