ಮೈಸೂರು

ಅ.21. ವಿಶ್ವಮಾತಾ ಗೋಮಾತಾ ನೃತ್ಯ ರೂಪಕ ಪ್ರದರ್ಶನ

ಮೈಸೂರು ಅ,17 :  ಮಂಗಳೂರಿನ ಶ್ರಿಶಕ್ತಿದರ್ಶನ ಯೋಗಾಶ್ರಮದಿಂದ ಗೋ ಸಂರಕ್ಷಣೆ ಜಾಗೃತಿಗಾಗಿ ‘ವಿಶ್ವಮಾತಾ ಗೋಮಾತಾ’ ನೃತ್ಯರೂಪಕವನ್ನು ಅ.21ರಂದು ಆಯೋಜಿಸಲಾಗಿದೆ ಎಂದು ಯೋಗಾಚಾರ್ಯ ದೇವಬಾಬಾ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಅಂದು ಸಂಜೆ 5 ಗಂಟೆಗೆ ಜಗನ್ಮೋಹನ ಅರಮನೆಯಲ್ಲಿ ನಡೆಯುವ ನೃತ್ಯರೂಪಕ ಕಾರ್ಯಕ್ರಮದಲ್ಲಿ ಸುತ್ತೂರು ಕ್ಷೇತ್ರದ ಜಗದ್ಗುರು ಶ್ರೀಶಿವರಾತ್ರಿ ದೇಶೀಕೇಂದ್ರ ಸ್ವಾಮಿಗಳು ಸಾನಿಧ್ಯ ವಹಿಸುವರು, ಮುಖ್ಯ ಅತಿಥಿಯಾಗಿ  ಭರತನಾಟ್ಯ ಕಲಾವಿದೆ ಡಾ.ವಸುಂಧರಾ ದೊರೆಸ್ವಾಮಿ, ಉದ್ಯಮಿ ಡಾ.ಬಿ.ಆರ್.ಪೈ, ಮಹಾರಾಣಿ ಕಾಲೇಜು ಪ್ರಾಂಶುಪಾಲ ಚೆನ್ನಬಸವೇಗೌಡ ಹಾಜರಿರುವರು ಎಂದು ತಿಳಿಸಿದರು.

ಕಳೆದ ಜುಲೈ 8ರಿಂದ ಆರಂಭವಾಗಿರುವ ಜಾಗೃತಿ ಜಾಥಾ ನೃತ್ಯರೂಪಕವು ಈಗಾಗಲೇ  ಮಂಗಳೂರು, ಬೆಂಗಳೂರು, ಚೆನ್ಹೈ ಸೇರಿದಂತೆ 15 ಪ್ರದರ್ಶನಗಳನ್ನು ಕಂಡಿದ್ದು 16ನೇ ಪ್ರದರ್ಶನವನ್ನು ಮೈಸೂರಿನಲ್ಲಿ ಆಯೋಜಿಸಲಾಗಿದ್ದು ಮುಂದಿನ ದಿನಗಳಲ್ಲಿ ಮುಂಬೈ, ದೆಹಲಿ, ಹೈದ್ರಾಬಾದ್, ರಾಜಸ್ಥಾನ, ಬರೋಡಾ, ಅಹ್ಮದಾಬಾದ್ ಸೇರಿದಂತೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ  108 ಪ್ರದರ್ಶನ ನೀಡುವ ಗುರಿ ಹೊಂದಲಾಗಿದ್ದು  ಮಂಗಳೂರಿನ ಕೆ.ವಿ.ರಮಣ್ ಮತ್ತು ಡಾ.ಎಮ್, ಪ್ರಭಾಕರ ಜೋಷಿಯವರ, ಸಾಹಿತ್ಯ, ಪರಿಕಲ್ಪನೆಯಲ್ಲಿ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಮೂಡಿರುವ ನೃತ್ಯರೂಪಕವನ್ನು ದೇಶಾಧ್ಯಂತ ಪ್ರದರ್ಶಿಸುವ ಮೂಲಕ ಗೋಮಾತೆ ಸಂರಕ್ಷಣೆ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆ.ಎಸ್. ಪ್ರಸನ್ನ ಲಕ್ಷ್ಮಿ , ವಿಶ್ವ ಹಿಂದೂ ಪರಿಷತ್ತಿನ ಮುರಳೀಧರ್ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: