ಮೈಸೂರು

ದೀಪಾವಳಿ ಆಕಾಶ ಬುಟ್ಟಿ ಹಾರಾಟ ಅ.18 ರಿಂದ

ಮೈಸೂರು,ಅ.17 : ನಗರದ ಹೆಚ್.ವಿ.ರಾಜೀವ್ ಸ್ನೇಹ ಬಳಗ, ಸ್ಪಂದನ ಟ್ರಸ್ಟ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕಲ್ಕಿ ಭಗವಾನ್ ಮಾನವ ಸೇವ ಆಲಯ ಸದಸ್ಯರು ಮತ್ತು ಕ್ಲೀನ್ ಫೌಂಡೇಷನ್ ಸಹಯೋಗದೊಂದಿಗೆ ದೀಪಾವಳಿ ಹಬ್ಬದ ಅಂಗವಾಗಿ ಪಟಾಕಿ ಬದಲಾಗಿ ಆಕಾಶ ಬುಟ್ಟಿ ಹಾರಿಸುವ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಬಿಜೆಪಿ ಮುಖಂಡ ಹೆಚ್.ವಿ.ರಾಜೀವ್ ತಿಳಿಸಿದರು.

ದೀಪಾವಳಿಯ ಈ ಸಂದರ್ಭದಲ್ಲಿ ನ.18 ರಿಂದ 20ರವರೆಗೆ, ಮೂರು ದಿನಗಳ ಕಾಲ ನಗರದ ಕುವೆಂಪುನಗರ, ಅಗ್ರಹಾರ, ಮತ್ತು ಆಶೋಕಪುರಂನಲ್ಲಿ ಆಕಾಶ ಬುಟ್ಟಿ ಹಾರಿಸುವ ಮೂಲಕ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅ.18ರಂದು ಕುವೆಂಪುನಗರದ ಪ್ರಮತಿ ಹಿಲ್ ವ್ಯೂನಲ್ಲಿ, ಅ.19ರಂದು ಅಗ್ರಹಾರದ ನಟರಾಜ ಕಾಲೇಜಿನಲ್ಲಿ, ಅ.20ರಂದು ಅಶೋಕಪುರಂನ ಸಿದ್ಧಾರ್ಥ ಹಾಸ್ಟೆಲ್ ಮೈದಾನದಲ್ಲಿ, ಸಂಜೆ 6 ರಿಂದ 8ಗಂಟೆವರೆಗೆ ಹಾರಿಸಲಾಗುವುದು ಎಂದು ತಿಳಿಸಿದರು.

ದೀಪಾವಳಿ ಹಬ್ಬದಲ್ಲಿ ಪಟಾಕಿ  ಸುಡುವ ಬದಲಿಗೆ ದೀಪಗಳನ್ನು ಹಚ್ಚಬೇಕು, ಮೂಲಕ ಸಂಸ್ಥೆಯು ಕಳೆದ ಮೂರು ವರ್ಷಗಳಿಂದ ಆಕಾಶ ಬುಟ್ಟಿ ಜನಜಾಗೃತಿ ಮೂಡಿಸುತಿದೆ, ಪಟಾಕಿಯಿಂದ ಸಾರ್ವಜನಿಕರಿಗೆ ಕಿರಿಕಿರಿ, ಪರಿಸರ ಮಾಲಿನ್ಯ  ಉಂಟಾಗುತ್ತಿದ್ದು ಈ ನಿಟ್ಟಿನಲ್ಲಿ ಜಾಗೃತಿ ಅಗತ್ಯವಿದೆ. ಪಟಾಕಿಯ ಸಿಡಿತದಿಂದ ಕಣ್ಣುಗಳನ್ನು ಕಳೆದುಕೊಂಡು ಅಂಧರಾದ ನಿದರ್ಶನಗಳು ಇವೆ. ಆದ್ದರಿಂದ ಪಟಾಕಿ ಬದಲಿಗೆ ದೀಪಗಳನ್ನು ಮೂಡಿಸಿ ಬೆಳಕಿನ ಹಬ್ಬವನ್ನು ಆಚರಿಸೋಣವೆಂದು ಆಶಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಬಿ.ಎಲ್.ಭೈರಪ್ಪ, ಅಭಿನಂದನಾ ರಾಜೇಅರಸ್, ವಿಜಯ್ ಕುಮಾರ್ ಮೊದಲಾದವರು ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: