ಮೈಸೂರು

ಎಟಿಎಂ ನಲ್ಲಿ ಬಂತು ಹರಿದ ನೋಟು ..!

ಮೈಸೂರು,ಅ.17:- ಎಟಿಎಂ ನಲ್ಲಿ ಹರಿದ ನೋಟು ಬಂದಿದ್ದು, ಹಣ ಡ್ರಾ ಮಾಡಿದವರನ್ನು ಆತಂಕ್ಕೆಡೆ ಮಾಡಿದೆ.

ನಗರದ ವಿದ್ಯಾರಣ್ಯಪುರಂನಲ್ಲಿನ ಎಸ್ ಬಿಐ ಎಟಿಎಂನಿಂದ ರಾಜು ರತ್ನಾಕರ್ ಎಂಬವರು 18ಸಾವಿರ ಹಣವನ್ನು ಡ್ರಾ ಮಾಡಿದ್ದರು. ಅದರಲ್ಲಿ 8.5ಸಾವಿರ ಹರಿದ ಹಾಗೂ ಪ್ಲಾಸ್ಟರ್ ಅಂಟಿಸಿದ ನೋಟು ಕಂಡು ಬಂದಿದೆ. ಹರಿದ ಮತ್ತು ಡ್ಯಾಮೇಜ್ ಆಗಿರುವ ನೋಟುಗಳು ಐನೂರು ಮುಖಬೆಲೆಯ ನೋಟಿನಲ್ಲಿ ಪತ್ತೆಯಾಗಿದೆ. ಅಧಿಕಾರಿಗಳು ಹರಿದ ನೋಟುಗಳನ್ನು ಯಾಕೆ ಎಟಿಎಂನಲ್ಲಿ ಹಾಕಲು ನೀಡಿದ್ದಾರೆ ಎಂಬ ಪ್ರಶ್ನೆ ಕೇಳಿ ಬಂದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: