ಮೈಸೂರು

ಅಡುಗೆ ಮನೆ ತ್ಯಾಜ್ಯದಿಂದ ಬಯೋ ಗ್ಯಾಸ್ ಘಟಕ ಸ್ಥಾಪಿಸಬಹುದು : ಡಿ.ರಂದೀಪ್

ಮೈಸೂರು, 17:- ಅಡುಗೆ ಮನೆ ತ್ಯಾಜ್ಯದಿಂದ ಬಯೋ ಗ್ಯಾಸ್ ಘಟಕ ಸ್ಥಾಪಿಸಬಹುದು. ಬಯೋ ಗ್ಯಾಸ್ ಘಟಕವು ನ್ಯಾಚುರಲ್ ಆಗಿದ್ದು ಇದು ಎಲ್.ಪಿ.ಜಿ ಗ್ಯಾಸ್‍ಕ್ಕಿಂತ ಕಡಿಮೆ ಇದ್ದು 25 ರಿಂದ 35 ಸಾವಿರ ಹಣದಲ್ಲಿ ಸ್ಥಾಪಿಸಬಹುದು ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದರು.
ಜಿಲ್ಲಾಧಿಕಾರಿಗಳ ವಸತಿಗೃಹ ಜಲದರ್ಶಿನಿಯಲ್ಲಿ ಎನ್‍ಐಇ-ಸಿಆರ್‍ಇಎಸ್‍ಟಿ ಮೈಸೂರು ಸಂಸ್ಥೆಯವರು ಅಡುಗೆ ಮನೆಯ ತ್ಯಾಜ್ಯ ವಸ್ತುಗಳಾದ ತರಕಾರಿ, ಅನ್ನ, ಸಾಂಬಾರ್, ಗಂಜಿ ಮುಂತಾದ ತ್ಯಾಜ್ಯಗಳಿಂದ ಬಯೋ ಗ್ಯಾಸ್ ಘಟಕ ಸ್ಥಾಪಿಸಿದ್ದು, ಬಯೋ ಗ್ಯಾಸ್ ಘಟಕಕ್ಕೆ ಜಿಲ್ಲಾಧಿಕಾರಿಗಳು ಚಾಲನೆ ನೀಡಿದರು.
ಬಯೋ ಗ್ಯಾಸ್ ಘಟಕದ ಬಗ್ಗೆ ಎನ್‍ಐಇ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕರಾದ ಶ್ಯಾಮ್ ಸುಂದರ್  ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಿದರು. ಅದರ ಬಗ್ಗೆ ಕೆಲವು ಸಂದೇಹಗಳಿದ್ದವು. ಅದನ್ನು ಬಗೆಹರಿಸಿದ ನಂತರ ಬಯೋ ಗ್ಯಾಸ್ ಘಟಕವನ್ನು ನಮ್ಮ ನಿವಾಸದಲ್ಲಿ ಸ್ಥಾಪಿಸಲು ಸೂಚನೆ ನೀಡಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ನಾಗರಿಕರು ತಮ್ಮ ಅಡುಗೆ ಮನೆಯ ವಿವಿಧ ತ್ಯಾಜ್ಯ ವಸ್ತುಗಳನ್ನು ಮಹಾನಗರ ಪಾಲಿಕೆಗೆ ನೀಡುವ ಬದಲು, ಬಯೋ ಗ್ಯಾಸ್ ಘಟಕ ಸ್ಥಾಪಿಸಬಹುದು.  ಇದೊಂದು ಉತ್ತಮ ತಂತ್ರಜ್ಞಾನವಾಗಿದ್ದು ಪರಿಸರ ಮಾಲಿನ್ಯ ತಡೆಯಲು ಹಾಗೂ ನಗರವನ್ನು ಸ್ವಚ್ಚವಾಗಿಡಲು ಸಹಕಾರಿಯಾಗುತ್ತದೆ. ಜನರು ವಿದ್ಯುತ್, ಎಲ್‍ಪಿಜಿ ಗೆ ಹೊಂದಿಕೊಳ್ಳದೆ ಇಂತಹ ತಂತ್ರಜ್ಞಾನ ಬಳಸಿಕೊಳ್ಳಬೇಕೆಂದು  ತಿಳಿಸಿದರು.  (ಎಸ್.ಎಚ್)

Leave a Reply

comments

Related Articles

error: