
ಪ್ರಮುಖ ಸುದ್ದಿವಿದೇಶ
ಪೋರ್ಚುಗಲ್, ಸ್ಪೇನ್ ಕಾಡು ಬೆಂಕಿಗಾಹುತಿ : 32 ಜನರ ಸಜೀವ ದಹನ
ಲಿಸ್ಬನ್, ಪ್ರಮುಖಸುದ್ದಿ (ಅ.17): ಸ್ಪೇನ್ ಮತ್ತು ಪೋರ್ಚುಗಲ್ನ ತಬುವಾ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿರುವ ಕಾಡ್ಗಿಚ್ಚಿಗೆ 32 ಜನರು ಸಜೀವ ದಹನವಾಗಿದ್ದಾರೆ.
ಅಗಾದ ಪ್ರಮಾಣದ ಕಾಡ್ಗಿಚ್ಚು ಕೆನ್ನಾಲಿಗೆ ಚಾಚಿದ್ದು, ಪೋರ್ಚುಗಲ್ ಹಾಗೂ ಸ್ಪೇನ್ ಜನತೆ ಕಾಡ್ಗಿಚ್ಚನ್ನು ನಿಯಂತ್ರಣಕ್ಕೆ ತರುವಲ್ಲಿ ಶ್ರಮಿಸುತ್ತಾ ಹೈರಾಣಾಗಿದ್ದಾರೆ. ಲಿಸ್ಬನ್ನಿಂದ 200 ಕಿ.ಮೀ ದೂರದಲ್ಲಿರುವ ತಬುವಾ ಅರಣ್ಯ ಪ್ರದೇಶದಲ್ಲಿ ಬೆಂಕಿ ಮತ್ತು ಬಾನೆತ್ತರತೆ ದಟ್ಟವಾದ ಹೊಗೆ ಆವರಿಸಿದೆ. ಈ ವರೆಗೆ ಒಂದು ತಿಂಗಳ ಮಗು ಸೇರಿದಂತೆ 32 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಏಳು ಜನರು ನಾಪತ್ತೆಯಾಗಿದ್ದು ಇವರ ಕುರಿತು ಇನ್ನು ಸಹ ಯಾವುದೇ ಸುಳಿವು ದೊರೆತಿಲ್ಲ.
ಕಾಡ್ಗಿಚ್ಚಿಗೆ ಸಿಲುಕಿ ಸುಮಾರು 56ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಇವರಲ್ಲಿ 16 ಜನರ ಪರಿಸ್ಥಿತಿ ಗಂಭೀರವಾಗಿದೆ ಎಂದು ಪೋರ್ಚುಗಲ್ ನಾಗರಿಕ ರಕ್ಷಣಾ ಪ್ರಾಧಿಕಾರ ಹೇಳಿಕೆ ನೀಡಿದೆ.
(ಎನ್ಬಿಎನ್)