ಪ್ರಮುಖ ಸುದ್ದಿಮೈಸೂರು

ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ : ಕನ್ನಡಪರ ಸಂಘಟನೆಗಳ ನಡುವೆಯೇ ವಾಗ್ವಾದ

ಮೈಸೂರು,ಅ.17:-  83ನೇ ಅಖಿಲ‌ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ನಡೆಸಲಾಯಿತು.

ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ  ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮನು ಬಳಿಗಾರ್ ನೇತೃತ್ವದಲ್ಲಿ ಸಭೆ ನಡೆಯಿತು. ನವೆಂಬರ್ 24,25,26ರಂದು ಸಮ್ಮೇಳನ ನಡೆಯಲಿದೆ. ರಾಯಚೂರಿನಲ್ಲಿ ಯಶಸ್ವಿಯಾಗಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು. ಈ ವೇಳೆ ಮೈಸೂರಿನಲ್ಲಿ ಸಮ್ಮೇಳನ ನಡೆಸುವ ಯೋಜನೆ ರೂಪಿಸಿದ್ದೆವು. 102ವರ್ಷಗಳ ಇತಿಹಾಸವಿರುವ ಈ ಸಮ್ಮೇಳನ ಮೈಸೂರಿನಲ್ಲಿ ನಡೆಯುತ್ತಿರುವುದು ತುಂಬಾ ಖುಷಿ ತಂದಿದೆ. ಮೈಸೂರಿನಲ್ಲಿಯೂ ಕೂಡ ಯಶಸ್ವಿಯಾಗಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ ಕನ್ನಡ ಪರ ಸಂಘಟನೆಗಳು ಸಲಹೆ, ಅಭಿಪ್ರಾಯಗಳನ್ನು ತಿಳಿಸಿ,ನಿಮ್ಮ ಸಹಕಾರವಿದ್ದರೆ ಸಮ್ಮೇಳನ ಉತ್ತಮವಾಗಿ ನಡೆಯುತ್ತದೆ ಎಂದು ತಿಳಿಸಿದರು.

ಸಭೆಯ ಆರಂಭದಲ್ಲಿಯೇ ಗದ್ದಲವೇರ್ಪಟ್ಟಿತ್ತು. ಅಭಿಪ್ರಾಯ ತಿಳಿಸುವ ವೇಳೆ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ಕನ್ನಡಪರ ಸಂಘಟನೆಗಳ ನಡುವೆಯೇ ವಾಗ್ವಾದವುಂಟಾಯಿತು. ಸಮ್ಮೇಳನ ನಡೆಸುವ ವಿಷಯಕ್ಕೆ ಕೆಲ ಕಾಲ ಗೊಂದಲ ಉಂಟಾಯಿತು. ಕೂಡಲೇ ಶಾಸಕ ವಾಸು ಸ್ಥಳಕ್ಕೆ ಬಂದು ಗೊಂದಲವನ್ನು ತಿಳಿಗೊಳಿಸಿದರು. ಮೊದಲಿಗೆ ಸಾಹಿತಿ ಬನ್ನೂರು ರಾಜು ಹೇಳಿಕೆಗೆ ವಿರೋಧ ವ್ಯಕ್ತವಾಯಿತು.ಪರಿಷತ್ತಿನ ಅಕ್ರಮಗಳ ತನಿಖೆ ಯಾಗಬೇಕು. ಅರಮನೆಯಲ್ಲೇ ಸಮ್ಮೇಳನ ನಡೆಯಬೇಕು ಎನ್ನುತ್ತಿದ್ದಂತೆ ಶಾಸಕ ವಾಸು ಅವರು ವೈಯುಕ್ತಿಕ ವಿಚಾರಗಳಿಗೆ ಅವಕಾಶವಿಲ್ಲ. ಸಮ್ಮೇಳನದ ಮುಖ್ಯ ವಿಚಾರಗಳ ಬಗ್ಗೆ ಅಭಿಪ್ರಾಯ, ಸೂಚನೆ ನೀಡಿ ಎಂದರು.

ಪ್ರತಿಯೊಬ್ಬರ ಅಭಿಪ್ರಾಯಕ್ಕೂ ಅಭಿಪ್ರಾಯ ತಿಳಿಸಲು ಎರಡು ನಿಮಿಷ ನಿಗದಿಪಡಿಸಲಾಯಿತು. ಸಮಾಧಾನವಾಗಿ ಸಲಹೆ, ಸೂಚನೆ ನೀಡಿ ಎಂದು ಮನು ಬಳಿಗಾರ್ ಹೇಳಿದರು. ಸಮ್ಮೇಳನದಲ್ಲಿ ಪುಸ್ತಕದ ಮಳಿಗೆಗಳನ್ನು ಹೆಚ್ಚಿಸಿ, ಸಾಹಿತಿಗಳು, ಕವಿಗಳಿಗೆ ಉತ್ತಮ ವ್ಯವಸ್ಥೆ ಕಲ್ಪಿಸಿ, ಉಚಿತ ಬಸ್ ವ್ಯವಸ್ಥೆ ಗಳನ್ನು ಕಲ್ಪಿಸಿ, ಮೈಸೂರಿನ ಎಲ್ಲಾ ವೃತ್ತಗಳಿಗೂ ಕನ್ನಡದ ಬಾವುಟ ಹಾಕಿ,ಸಮ್ಮೇಳನದ ವೇದಿಕೆಗೆ ನಾಲ್ವಡಿ ಕೃಷ್ಣರಾಜ ಒಡೆಯರ ಹೆಸರಿಡಿ  ಎಂದು ಕನ್ನಡ ಪರ‌ ಸಂಘಟನೆಗಳು ಮನವಿ ಮಾಡಿದವು.

ಸಭೆಯಲ್ಲಿ ಸಭೆಯಲ್ಲಿ  ಮೇಯರ್ ಎಂ.ಜೆ.ರವಿಕುಮಾರ್, ಜಿಲ್ಲಾಧಿಕಾರಿ ಡಿ. ರಂದೀಪ್, ಅನೇಕ ಕನ್ನಡಪರ ಸಂಘ ಸಂಸ್ಥೆಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಅಧಿಕಾರಿಗಳು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: