ಸುದ್ದಿ ಸಂಕ್ಷಿಪ್ತ

ಲೋಕಾಯುಕ್ತರಿಂದ ಅಹವಾಲು ಸ್ವೀಕಾರ

ಮೈಸೂರು.ಅ.18:ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳಿಂದ ಅಕ್ಟೋಬರ್ 21 ರಿಂದ 30 ರವರೆಗೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ತಾಲೂಕು ಕೇಂದ್ರಗಳಲ್ಲಿ ಸಾರ್ವಜನಿಕರಿಂದ ದೂರು/ ಅಹವಾಲು ಸ್ವೀಕರಿಸಲಾಗುವುದು ಎಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಪೊಲೀಸ್ ಅಧೀಕ್ಷೆ ಜೆ.ಕೆ. ರಶ್ಮಿ  ತಿಳಿಸಿದ್ದಾರೆ.
ಅಕ್ಟೋಬರ್ 21-ಮೈಸೂರು ನಗರದ ಜೆ.ಎಲ್.ಬಿ. ರಸ್ತೆಯಲ್ಲಿರುವ ಚಾಮುಂಡಿ ಅತಿಥಿಗೃಹ, ಅಕ್ಟೋಬರ್ 23- ತಾಲೂಕು ಕಛೇರಿ ಆವರಣ ಮೈಸೂರು, ಅಕ್ಟೋಬರ್ 24 ತಾಲೂಕು ಕಚೇರಿ ಆವರಣ, ಟಿ.ನರಸೀಪುರ ಅಕ್ಟೋಬರ್ 25- ಪಿಡಬ್ಲ್ಯೂಡಿ  ಅತಿಥಿ  ಗೃಹ  ಹೆಚ್.ಡಿ.ಕೋಟೆ,  ಅಕ್ಟೋಬರ್  26- ಪಿಡಬ್ಲ್ಯೂಡಿ  ಅತಿಥಿ ಗೃಹ  ಪಿರಿಯಾಪಟ್ಟಣ,  ಅಕ್ಟೋಬರ್ 27- ಪಿಡಬ್ಲ್ಯೂಡಿ  ಅತಿಥಿ ಗೃಹ ಹುಣಸೂರು,   ಅಕ್ಟೋಬರ್ 28- ತಾಲೂಕು ಕಚೇರಿ  ಆವರಣ ನಂಜನಗೂಡು ಹಾಗೂ ಅಕ್ಟೋಬರ್30- ಪಿಡಬ್ಲ್ಯೂಡಿ  ಅತಿಥಿ ಗೃಹ  ಕೆ.ಆರ್.ನಗರ  ತಾಲೂಕಿನಲ್ಲಿ ನಡೆಯಲಿದೆ.   ಸರ್ಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳಿಗಾಗಿ ವಿಳಂಬ, ಲಂಚದ ಬೇಡಿಕೆ ಹಾಗೂ ಇನ್ನಿತರೆ ತೊಂದರೆ ನೀಡುವ ಸರ್ಕಾರಿ ಅಧಿಕಾರಿ ನೌಕರರ ವಿರುದ್ಧ ಸಾರ್ವಜನಿಕರು ನಿಗದಿತ ಪ್ರಪತ್ರದಲ್ಲಿ ದೂರು ನೀಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-252110 ನ್ನು ಸಂಪರ್ಕಿಸಬಹುದು.  ಸಾರ್ವಜನಿಕರು ಈ ಕಾರ್ಯಕ್ರಮದ ಪ್ರಯೋಜನ ಪಡೆಯಬೇಕೆಂದು  ಪ್ರಕಟಣೆಯಲ್ಲಿ ಕೋರಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: