ಪ್ರಮುಖ ಸುದ್ದಿಮೈಸೂರು

ದೀಪಗಳ ಹಬ್ಬ ದೀಪಾವಳಿ ಎಲ್ಲರ ಬಾಳಿನಲ್ಲಿಯೂ ಬೆಳಕಿನ ಪ್ರಭೆಯನ್ನು ಬೀರಲಿ

ಮೈಸೂರು,ಅ.18:- ದೀಪಾವಳಿ ಅಜ್ಞಾನವನ್ನು ತೊಲಗಿಸಿ ಸುಜ್ಞಾನವನ್ನು ಬೆಳಗುವ ದೀಪಗಳ ಹಬ್ಬ. ಶರದ್ ಋತುವಿನಲ್ಲಿ ಪ್ರತಿವರ್ಷವೂ ಆಚರಿಸುವ ಹಿಂದೂಗಳ ಪ್ರಾಚೀನ ಹಬ್ಬವಾಗಿದೆ. ಭಾರತದಲ್ಲಿ ಆಚರಣೆಯಲ್ಲಿರುವ ಪ್ರಭಾವಶಾಲಿ ಹಬ್ಬವಿದಾಗಿದ್ದು ಮೂರುದಿನಗಳ ಕಾಲ  ಆಚರಿಸಲಾಗುತ್ತದೆ. ಸಾಮಾಜಿಕ ಮತ್ತು ಧಾರ್ಮಿಕ ದೃಷ್ಟಿಯಿಂದಲೂ ಈ ಹಬ್ಬ ಹೆಚ್ಚಿನ ಮಹತ್ವ ಪಡೆದಿದೆ.

ಈ ಬಾರಿಯ ದೀಪಾವಳಿಯ ಅಮಾವಾಸ್ಯೆ ತಿಥಿ, ಗುರುವಾರದಂದು ಚಿತ್ರಾ ನಕ್ಷತ್ರ ಒಳ್ಳೆಯ ಯೋಗದ ದಿನವಾಗಿದೆಯಂತೆ, ಇದು ಲಕ್ಷ್ಮಿ, ಗಣೇಶನ ಪೂಜೆಗೆ ಶುಭಕರವಾಗಿದ್ದು, ಇಂತಹ ಸುಯೋಗ 27ವರ್ಷಗಳ ಬಳಿಕ ಒದಗಿ ಬಂದಿದೆ ಎನ್ನಲಾಗುತ್ತಿದೆ. ಇಂತಹ ಯೋಗ 1990ರಲ್ಲಿ ಒಮ್ಮೆ ಬಂದಿದ್ದು, ಮತ್ತೆ 2021ರಲ್ಲಿ ಬರಲಿದೆಯಂತೆ.ಗುರುವಾರ ಲಕ್ಷ್ಮೀಪೂಜೆಗೆ ಪ್ರಶಸ್ತ ದಿನವಾಗಿದ್ದು, ಲಕ್ಷ್ಮೀಪೂಜೆಯನ್ನು ಪ್ರದೋಷಕಾಲದಲ್ಲಿಯೇಮಾಡಬೇಕು ಎನ್ನಲಾಗುತ್ತದೆ. ಈ ಸಮಯದಲ್ಲಿ ಮಾಡುವುದರಿಂದ ಲಕ್ಷ್ಮೀ ಮತ್ತು ಗಣೇಶ ಪ್ರಸನ್ನರಾಗುತ್ತಾರೆ. ಧನ-ಐಶ್ವರ್ಯಗಳು ಪ್ರಾಪ್ತವಾಗುತ್ತವೆಂಬ ನಂಬಿಕೆಯಿದೆ. ಪ್ರದೋಷಕಾಲವು ಸಾಯಂಕಾಲ 5.54ರಿಂದ ಆರಂಭವಾಗಿ ರಾತ್ರಿ 8.26ರವರೆಗೆ ಇರಲಿದೆ.

ಮೈಸೂರಿನಲ್ಲಿಯೂ ಸಡಗರ ಸಂಭ್ರಮದ ದೀಪಾವಳಿ ಹಬ್ಬ ಆಚರಿಸುತ್ತಿದ್ದಾರೆ. ಹೂಹಣ್ಣುಗಳ ಖರೀದಿ, ದೀಪಬೆಳಗುವ ಹಣತೆಯ ಖರೀದಿ ಜೋರಾಗಿಯೇ ನಡೆದಿದೆ. ಬೆಲೆಯೇರಿಕೆಯ ನಡುವೆಯೂ ಹಬ್ಬದ ತಯಾರಿಗಳು ಜೋರಾಗಿಯೇ ನಡೆದಿದೆ. ಮನೆಯ ಮುಂದೆ ರಂಗವಲ್ಲಿಯನ್ನು ರಚಿಸಿ, ಸಿಂಗರಿಸಿ ದೀಪಗಳ ಅಲಂಕಾರ ಮಾಡಲಾಗುತ್ತಿದೆ. ಎಲ್ಲರೂ ಸಡಗರ ಸಂಭ್ರಮದಿಂದ ಆಚರಿಸುವ  ದೀಪಗಳ ಹಬ್ಬ ದೀಪಾವಳಿ ಎಲ್ಲರ ಬಾಳಿನಲ್ಲಿಯೂ ಬೆಳಕಿನ ಪ್ರಭೆಯನ್ನು ಬೀರಿ, ಅಂಧಕಾರವನ್ನು ತೊಲಗಿಸಲಿ.  (ಎಸ್.ಎಚ್)

Leave a Reply

comments

Related Articles

error: